ನಾನು ಬೇಡಿದನೆಂದು ಎನ್ನ ಕರುಣಿಸ ಬೇಡ ಗುರುವೇ
ಎನ್ನ ಬಕುತಿಯು ನಿಜವಾದರೆ ನೀ ಎನ್ನ ದೂರ ಮಾಡದಿರು ಗುರುವೇ|
ಕಂಠ ಉಬ್ಬಿ ಬರಿವುದು ನಿನ್ನ ನಾಮವನು ನೆನೆವಾಗ
ಹೃದಯ ಹಗುರವಾಗುವುದು ನಿನ್ನ ನಾಮ ಪಾಡುವಾಗ ದೊರೆಯೇ|
ಎಲ್ಲರೊಡಗೂಡಿ ಬಲು ಮುದದಿ ನಿನ್ನ ಚರಿತೆಯ ಹಾಡುವೆನು ನಾನು
ನೀ ಎಲ್ಲರನೂ ಕರುಣದಿ ಹರಸುವಾಗ ಒಮ್ಮೆ ನೋಡು ನನ್ನನು|
ಕಿಂಚಿತ್ತು ನೆನೆದರೂ ನಾನು ಪಡೆವೆನು ದಿನದ ಕೂಳು ಗುರುವೇ
ನಿರಂತರ ನೆನೆದರೆ ದೊರೆಯುವುದು ಆತ್ಮಕೆ ಬಲು ಆನಂದವು ದೊರೆಯೇ|
ನನ್ನನೇ ಅರ್ಪಿಸುವೆನೆಂದು ಹೇಳಲು ಬಲು ಭಯವು ಗುರುವೇ
ನಾ ಬಲ್ಲೆನು ನನ್ನ ಮನವನು ಅದು ಬಲು ದುರ್ಭಲವು ದೊರೆಯೇ|
Guruvarya venkatachala.
ReplyDeleteNimma paadagalige nanna bhakti poorvaka namanagalu. Yellarigu Daari torisi olleyadaaguvante asheervadisi. Hari om tatsat.