ಎಷ್ಟು ವರುಷ ಉರುಳಿತು ಅರಿಯೆ ಎಷ್ಟು ಸಮಯ ಕಳೆಯಿತೋ ತಿಳಿಯೇ
ಏನೂ ಸಾಧಿಸದೆ ಏನೂ ಪಡೆಯದೇ ಬರೀ ದೇಹ ಸಾಕಿದೆನೋ ಗುರುವೇ|
ಬರೀ ನಿನ್ನ ಚರಿತವ ಕೇಳಿ ನಿನ್ನ ಮಹಿಮೆಯ ಪಾಡಿ ಪುಳಕಿತನಾದೆನೋ
ನಿನ್ನ ಕಾಣದೆ ನಿನ್ನ ನುಡಿಯ ಕೇಳದೇ ಬರೀ ಬರಡು ಜೀವನ ಸಾಗಿಸಿಹೆನೋ|
ಭೂಮಿಗೆ ಬಂದ ಮಹದೇವನೇ ಶುದ್ದ ಮನವ ಹುಡುಕಿ ಹರಸಿದೆ ನೀನು
ಕರ್ಮ ಕಳೆಯದೇ ಯೋಗ್ಯನಾಗದೆ ನಿನ್ನ ದರ್ಶನಭಾಗ್ಯದಿಂದ ವಂಚಿತನಾದೆನು|
ಬೇರೇನೂ ಕೇಳದೆ ಶುದ್ದ ಮನದ ನಿಜ ಬಕುತಿಯ ಬಯಸುವೆ ನೀನು
ಒಳಗೊಂದು ಹೊರಗೊಂದು ಭಾವವ ವ್ಯರ್ಜಿಸೆ ಮುದದಿ ಹರಸುವೆ ನೀನು|
ಆಡಂಬರಕೆ ಒಲಿಯದಾ ದೇವ ನೀನು ನಿರಾಡಂಬರವ ಬಯಸುವವನು
ಅಂಬರದೊಳಗಿಲ್ಲ ಆ ದೇವನು ಅವ ನಿನ್ನೊಳಗಿಹನೆಂದು ಸಾರಿ ಹೇಳಿದವನು|
Venkatachala avadootarige nanna saashtaanga pranaamagalu. Sadaa kaala nimma aashirvaada haagu rakshe yellara mele erali haagu nimma aashirvaada beduva nimma obba bhakta. Sarve jano sukinobavantu.
ReplyDelete