ಯಾರು ಕಾಯ್ವರೋ ಎನ್ನನು ನೀ ದೂರ ಮಾಡಿದರೆ ನನ್ನ ದೇವನೇ
ನಿನ್ನ ಬೇಡದಲೇ ಇನ್ಯಾವ ದೇವನ ಕಾಣೆನೋ ನಾನು ಸದ್ಗುರುನಾಥನೇ|
ಜನುಮ ಜನುಮದ ಅರಿವು ನನಗಿಲ್ಲ ಈ ಜನುಮದಿ ನೀನೇ ಎನಗೆಲ್ಲ
ಪಾಪ ಪುಣ್ಯಗಳ ಕರ್ಮ ಫಲಗಳ ಅರಿವು ಈ ಮೂಡ ಮನಕೆ ತಿಳಿಯದಲ್ಲ|
ಬದುಕು ನಡೆಸುವ ನಾನು ನಿನ್ನ ಮೊರೆ ಹೋಗದೇ ಬೇರೆ ದಾರಿ ಬಯಸೆನಲ್ಲಾ ಗುರುವೇ
ಅಂತರಂಗದೊಳು ಭಾವಶುದ್ದಿಗೊಳಿಸಿ ಮನದ ಮಲಿನವ ದೂರ ಮಾಡೋ ದೊರೆಯೇ|
ನಿನ್ನ ನುಡಿಯೊಳು ತುಂಬಿದ ವೇದಸಾರವ ಈ ಮನವು ಅರಿಯದಾಯಿತಲ್ಲ
ನಿನ್ನ ನಡೆಯಲಿ ಅಡಗಿಹ ಬದುಕಿನ ಅರ್ಥ ತಿಳಿಯದೆ ಮೂಡನಾದೆನಲ್ಲಾ|
ಬರೀ ಬಂದು ಹೋಗುವ ಬದುಕಾಗದೆ ನಿನ್ನ ಕರುಣೆ ನೀಡಿ ಹರಸೋ ಎಂದೆನಲ್ಲ
ಗುರುನಾಥ ನೀನಿರದ ಈ ಮನವು ಒಂದಿನಿತೂ ಈ ಜೀವದೊಳು ನಿಲ್ಲದಲ್ಲಾ|
Parama poojya venkatachala avadootarige nanna bhakti poorvaka namanagalu. Yellarigu e kantaka dinda mukthi kodisi haagu yellara manasinalli bhakti haagu bhaava moodisi asheervadisi. Sarve jano sukinobavantu.
ReplyDelete