ಎಲ್ಲರೂ ಹಾಡಿ ಭಜಿಸಿದಂತೆ ನಾ ನಿನ್ನ ನಾಮವ ಭಜಿಸಲಾರೆನೋ
ಎನ್ನ ಅಂತರಂಗದೊಳು ನೆಲೆ ನಿಲ್ಲುವ ತನಕ ನಿನ್ನ ನಾಮವ ಉಸಿರಲಿ ಬೆರೆಸುವೆನೋ|
ಹಾರ ತುರಾಯಿಗಳ ಫಲ ಪುಷ್ಪಗಳ ನಿನಗೆ ನಾ ಅರ್ಪಿಸೆನೋ
ನಿನ್ನ ನುಡಿಯಂತೆ ಎನ್ನ ಈ ನನ್ನ ದೇಹವ ಹಣ್ಣು ಮಾಡಿ ಸೇವೆ ನೀಡಿವೆನೋ|
ದೀಪ ದೂಪಗಳ ದೂಪ ಆರತಿಗಳ ನಾ ನಿನಗೆ ಅರ್ಪಿಸೆನೋ
ಮನದ ಅಂಗಳದಿ ನಿನ್ನ ಪೂಜಿಸುತ ಭಾವ ಪುಷ್ಪಗಳ ನೀಡುವೆನೋ|
ನಿನ್ನ ಸೇವೆಗೆಂದು ಈ ನನ್ನ ಜೀವವ ಮೀಸಲಿಟ್ಟು ಕಾಲ ಕಳೆವೆನೋ
ಎನ್ನ ಹೃದಯ ಕಮಲದೊಳು ನೆಲೆನಿಂತು ಹರಸಿದೊಡೆ ಧನ್ಯನಾಗುವೆನೋ|
ನಿನ್ನ ನಾಮ ಜಪಿಸುತಿರೆ ಮನದ ಕ್ಲೇಶವ ನೀಗುವ ಭಾವರೋಗ ವೈದ್ಯನೋ
ಮನದ ಅಹಂಕಾರವ ಅಳಿಸಿ ನಿಜ ಅರಿವ ಮೂಡಿಸಿ ಸಲಹೋ ಎನ್ನನು|
Poojya venkatachala avadootarige nanna bhakti poorvaka namanagalu. Yellaranu sadaa kaala Harasi asheervadisi Kaapadi swamy. Hari om tatsat.
ReplyDelete