ಗುರುನಾಥ ಗಾನಾಮೃತ
ದೂಡದಿರು ಗುರುವೇ ಭವದೊಳಗೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್
ದೂಡದಿರು ಗುರುವೇ ಭವದೊಳಗೆ
ಸಿಲುಕಿಸದಿರು ಸದ್ಗುರುವೇ ಮೋಹದೊಳಗೆ || ಪ ।।
ಬಂಧಿಸದಿರು ಪಾಶದೊಳಲಿ
ಮೆರೆಸದಿರು ನಶ್ವರ ಸಂಪತ್ತಿನಲಿ
ಮುಳುಗಿಸದಿರು ಕ್ಷಣಿಕ ಸುಖದಲಿ ।। ೧ ।।
ಮೂಕನಾಗಿಸು ಕೃತಕತೆಯಲಿ
ಅಂಧನಾಗಿಸು ಬಣ್ಣದ ಲೋಕದಲಿ
ಬಧಿರನಾಗಿಸು ಮಿಥ್ಯಾಸ್ತುತಿಯಲಿ ।। ೨ ।।
ಲೀನಗೊಳಿಸೆಮ್ಮ ನಿನ್ನ ಧ್ಯಾನದಲೀ
ನೆಲೆಸು ನೀ ನಮ್ಮ ಚಿತ್ತೇಕಾಗ್ರದಲಿ
ಮಾರ್ಗಬಂಧುವಾಗು ಮೋಕ್ಷದ ದಾರಿಯಲಿ ।। ೩ ।।
No comments:
Post a Comment