ಗುರುನಾಥ ಗಾನಾಮೃತ
ಗುರುನಾಥರ ದರ್ಶನಕೆಂದು ಬಂದೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥರ ದರ್ಶನಕೆಂದು ಬಂದೆ
ಆ ತೇಜೋಮೂರ್ತಿಯ ನೋಡುತ ನಿಂದೆ |
ಭಕ್ತಿಕುಸುಮಗಳ ಅರ್ಪಿಸಲು ತಂದೆ
ಸಂತೋಷದಿ ಮಾತುಬಾರದೆ ಮೂಕಳಾದೆ ||
ನನ್ನ ಮನದಾಳದ ದನಿಯೇ ನೀನು
ನನ್ನ ಚಿತ್ತದೊಳಗಿನ ಧಣಿಯೇ ನೀನು |
ನನ್ನ ಹೃದಯದೊಳಗಿನ ಮೂರ್ತಿಯೇ ನೀನು
ನನ್ನ ಅಂತರಂಗದ ಮೌನವೇ ನೀನು || ೧ ||
ಸಮವುಂಟೇ ಇವರ ಹೋಲಿಕೆಗೆ
ಸಾದೃಶ್ಯವುಂಟೇ ಇವರ ಅನುಗ್ರಹಕೆ |
ಶರಣಾಗತರಿಗೆ ಅಭಯನೀಡುವ ಪರಿಗೆ
ಸಾಧಕರಿಗೆ ದಾರಿತೋರುವ ರೀತಿಗೆ || ೨ ||
ಮಾಡುವ ಕರ್ಮಗಳು ನಿನ್ನುಪಾಸನಾ
ಫಲಗಳೆಲ್ಲವು ನಿನಗೇ ಸಮರ್ಪಣಾ |
ನಿನ್ನ ಪಾದಸೇವಕನೆಂಬ ಭಾವನೆ
ಉಸಿರೊಳು ಬೆರೆತಿರಲೆಂದೇ ಯಾಚನೆ || ೩ ||
No comments:
Post a Comment