ಗುರುನಾಥ ಗಾನಾಮೃತ
ಜ್ಞಾನಮಾರ್ಗದ ಕಾಂತಿಯಲ್ಲಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಜ್ಞಾನಮಾರ್ಗದ ಕಾಂತಿಯಲ್ಲಿ
ಅಜ್ಞಾನವೆಂದೂ ಇರದು |
ಆತ್ಮಜ್ಞಾನದ ಪ್ರಕಾಶದಲ್ಲಿ
ಸೂರ್ಯತೇಜಕೂ ಕುಂದು || ೧ ||
ಸದ್ಗುರುವಿನ ವಚನಾಮೃತದಲ್ಲಿ
ಅಡಗಿದೆ ವೇದಗಳ ಸಾರ |
ಅರಿತು ನೆಡೆದರೆ ಈ ದಾರಿಯಲ್ಲಿ
ದಾಟಿಸಬಲ್ಲದು ಭವಸಾಗರ || ೨ ||
ನಾನೆಂಬ ಭಾವ ಅಳಿದು
ಗುರುವೇ ಸಕಲೆಂದು ಬಲಿದು !
ನಾಮಸ್ಮರಣೆಯೇ ಉಸಿರಾಗಿ
ಬದುಕಾಗಲಿ ಸ್ಥಿರವಾಗಿ || ೩ ||
ಭೋಗವೆಲ್ಲವೂ ಕೃತಕ
ಅಲಂಕಾರವೆಲ್ಲವೂ ಕ್ಷಣಿಕ |
ಗುರುಪದಪೂಜೆಯೇ ಜೀವಿಕ
ಜೀವನವಾಗಲೀ ಸಾರ್ಥಕ || ೪ ||
No comments:
Post a Comment