ಒಟ್ಟು ನೋಟಗಳು

Thursday, July 26, 2018

ಗುರುನಾಥ ಗಾನಾಮೃತ 
ಮುನಿದು ಮುಖವ ಗಂಟಿಕ್ಕುವೆಯೋ
ರಚನೆ: ಅಂಬಾಸುತ 

ಮುನಿದು ಮುಖವ ಗಂಟಿಕ್ಕುವೆಯೋ
ಗುರುವೇ ನಿನಗೆ ಸರಿ ಇದು ಏನೋ?
ತರಳರ ತಪ್ಪನು ಮನ್ನಿಸದೆ
ಮೌನವಾಗಿರುವುದು ಸರಿಯೇನೋ? ||ಪ||

ಹುಡುಗುತನದಲಿ ತುಡುಕತನವ
ಗಡಬಡಿಸುತಲಿ ಮಾಡಿದೆನೆಂದು
ನೇಮ ಮುರಿದು ನಾರೀಮಣಿಯ
ಹೆಸರ ಹಿಡಿದು ಕೂಗಿದೆನೆಂದೂ ||೧||

ಹಸಿವ ತಡೆಯದೆ ಹುಸಿಯಾ ನುಡಿದು
ಕಸಿವಿಸಿಯಲಿ ಉಂಡೆನೆಂದು
ಮಡಿಯಲಿರದೆ ಮಾಧವನಾ
ಚರಣಕರ್ಚನೆ ಮಾಡಿದೆನೆಂದೂ ||೨||

ಪತ್ರೆ ತರಲು ಹೋಗುವೆನೆಂದು
ಪಾಠ ಬಿಟ್ಟು ಹೋದೆನೆಂದು
ಪದವ ಜೋಡಿಸೊ ಗೀಳಲಿ ಬಿದ್ದು
ಪಾದಸೇವೆಯ ಮರೆತೇನೆಂದೂ ||೩||

ಸಖರಾಯಪುರವಾಸನೆ ನಿನ್ನ
ಸಖನೆಂದು ಕರೆದೇನೆಂದು
ಅಂಬಾಸುತನ ಪದಗಳೊಳಗಿನ
ಭಾವವನ್ನು  ಅರಿಯೆ ಎಂದೂ ||೪||
ಗುರುನಾಥ ಗಾನಾಮೃತ 
ಸ್ಮರಿಸೊ ಗುರುನಾಥನಾ
ರಚನೆ: ಅಂಬಾಸುತ 

ಸ್ಮರಿಸೊ ಗುರುನಾಥನಾ
ಮನವೇ ಸ್ಮರಿಸೋ ಗುರುನಾಥನಾ ||ಪ||

ಅವಧೂತಾತ್ಮಕನ ಅನಂತ ಮಹಿಮನ
ಅಪ್ರಮೇಯನ ಆನಂದರೂಪನ ||೧||

ಸ್ವಾತ್ಮಾರಾಮನ ಸಾಧುಸಜ್ಜನ ವಂದಿತನ
ಸದ್ಗುರುರೂಪನ ಸುಲಭಸಾಧ್ಯನ ||೨||

ಅಕ್ಷರವಾದವನ  ವರೇಣ್ಯತ್ವನ
ಕರ್ಮ ಕಳೆದವನ ತತ್ವಪರಿಪೂರ್ಣನ ||೩||

ಸಖರಾಯಪುರದೊಳು ನಿಂತವನ
ಅಂಬಾಸುತನ ದೊರೆ ಗುರುನಾಥನ ||೪||
ಗುರುನಾಥ ಗಾನಾಮೃತ 
ಹರಿವಾಣ ಸೇವೆಯ ನಿನಗೆ ಅರ್ಪಿಸುವೆನು ಹರಸೊ ಗುರುವೆ
ರಚನೆ: ಅಂಬಾಸುತ 

ಹರಿವಾಣ ಸೇವೆಯ ನಿನಗೆ ಅರ್ಪಿಸುವೆನು ಹರಸೊ ಗುರುವೆ
ಹರಿಯು ನೀನೇ ಹರನು ನೀನೇ ಅಜನು ನೀನೇ ಎನ್ನುತ್ತಾ ||ಪ||

ಅಭಿಷೇಕ ಅಲಂಕಾರ ನಿವೇದನೆ ಆರತಿಗಳ ಮಾಡಿ
ಸಡಗರದಿ ಸಂಭ್ರಮದಿ ಸರ್ವ ಭಕ್ತರನ್ನೊಡಗೂಡೀ ||೧||

ಧೇಹಿ ಧೇಹಿ ಎನುತಾ ಕರವ ಚಾಚಿ ನಿನ್ನಡಿಯಲ್ಲೀ ಬೇಡಿ
ಸೇವೆ ಮಾಡುವೆ ಸೇವ್ಯ ಸೇವಕ ಭಾವವೀಯೊ ಗುರುವೇ ಎನುತಾ ||೨||

ಬಂಗಾರದ ಹರಿವಾಣದಲಿ ನಿನ್ನ ಪದಪಂಕಜದೊಳಗಿಟ್ಟಾ
ತುಳಸಿ ಪತ್ರೆ ಪುಷ್ಪಗಳನು ಇರಿಸಿ ಶಿರದ ಮೇಲೆ ಹೊತ್ತು  ||೩||

ತಾಳ ವೀಣೆಯ ಧರಿಸೀ ಕರದಿ ನಿನ್ನ ನಾಮವ ಪಾಡುತಲಿ
ಲಯಗೊಳಿಸೊ ನಿನ್ನೊಳಗೆನ್ನಾ ಎನುತ ಲಯಬದ್ದನಾಗಿ ||೪||

ಸಖರಾಯಪುರವಾಸಿ ಗುರುವೇ ಅಂಬಾಸುತನಾ ದೊರೆಯೇ
ಸರ್ವ ಸೇವೆಯ ಅರ್ಪಿಸುವೆನೊ ಸಂತ ಸೇವೆಯ ಎನಗೀಯೋ ||೫||
ಗುರುನಾಥ ಗಾನಾಮೃತ 
ಭೋಗಿಯಲ್ಲವೊ ಎನ್ನ ಗುರುನಾಥ
ರಚನೆ: ಅಂಬಾಸುತ 

ಭೋಗಿಯಲ್ಲವೊ ಎನ್ನ ಗುರುನಾಥ
ಭವರೋಗ ಹರಿಸುವ ವಿರಾಗಿ ಮಹಾಯೋಗಿ ||ಪ||

ಅರಿಯದವನಾ ಅರಿವಿಗೆ ಇವ ಸಂಸಾರಿ
ಅರಿತವರಿಗೆ ಇವನೇ ಮುರಾರಿ
ಲೋಕಬಂಧವಿರದ ನಾಕದ ಅಧಿಕಾರಿ
ಸೋಹಂಭಾವದಿಂದಿರುವ ಮನಸಂಚಾರಿ ||೧||

ಮಗುವಾಗಿ ನಕ್ಕಾನೊಮ್ಮೆ ಗದರಿಸಿ ನುಡಿದಾನೊಮ್ಮೆ
ಲಘುತನವ ಗುರುವಾಗಿ ಅಳಿಸಿಹನೆ
ಹಂಗಿರದ ರಂಗಿರದ ಸತ್ಸಂತದೊಡೆಯಾನು
ಮಂಗಮಾಯವಾಗೊ ದೇಹ ಭಾವಾವ ಕಳೆದಾನೊ ||೨||

ಆನಂದರೂಪ ನಿಜಾನಂದ ನೀಡುತಾ
ಜಗದಾನಂದದ ಸವಿಯನ್ನೇ ಉಣಿಸ್ಯಾನೊ
ಮಾಯಾಪಾಶಗಳ ಮರೆಮಾಚಿಸೀ ಬೇಗ
ಮಹಾದೇವ ತಾನಾಗೇ ಎಮಗೆ ಕಂಡ್ಯಾನೊ ||೩||

ಸಖರಾಯಪಟ್ಟಣದೊಳಗೆ ಮೆರೆಯುತ್ತಾ
ಸಖರಾಗಿ ಸತ್ಶಿಷ್ಯರನು ಪೊರೆದಾನು
ಅಂಬಾಸುತನಿಂ ನಿತ್ಯ ಪದಸೇವೆ ಪಡೆಯುತ್ತಾ
ಪಾದಪಂಕಜದ ದರುಶನ ನೀಡ್ಯಾನು ||೪||

Tuesday, July 24, 2018

ಗುರುನಾಥ ಗಾನಾಮೃತ 
ಹೊರಟೆ ನಾನು ಸಖರಾಯಪುರಕೆ ಬಲು ಸಂಭ್ರಮದಿ 
ರಚನೆ: ಆನಂದರಾಮ್, ಶೃಂಗೇರಿ  


ಹೊರಟೆ ನಾನು ಸಖರಾಯಪುರಕೆ ಬಲು ಸಂಭ್ರಮದಿ 
ಗುರುವ ಕಂಡು ಬೇಡಿ ಬರಲು ಬಲು ಹಂಬಲದಿ|

ದಾರಿ ಸವೆಸಿ ಭಕ್ತಿ ಬಾವದಿ ಗುರುವೇ ನಿನ್ನ  ನೆನೆಯುತ 
ಹೆಜ್ಜೆ ಹೆಜ್ಜೆಗೂ ನೀವೇ ಕಾಯಬೇಕು ನನ್ನ ಎನ್ನುತಾ|

ದಣಿವಿಲ್ಲಾ ಈ ದೇಹಕೆ ಎಷ್ಟು ಬಜಿಸಿದರು ಎನುತ
ಅರಿವಿಲ್ಲ ನೋವಿನ ಸುಳಿವಿಲ್ಲ ನೆನೆಸಿದರೆ ಹಾಡುತ |

ಮೂಡನೋ ನಾನು ಬಕುತಿಯ ಗುಟ್ಟು ತಿಳಿದಿಲ್ಲ
ಬರೀ ನೋಡಿ ಕೇಳಿ ನಂಬಿ ನಡೆವ ಭಕ್ತಿ ಇದೆಲ್ಲಾ|

ಸಣ್ಣವನಾದೆನು ನಾ ಗುರುಬಂದುಗಳ ಜೊತೆಗೂಡಿ
ಹೆಚ್ಚು ಅರಿತೆನೋ ನಿಜ ಬಕುತಿಯ ಮಾಡಿ ನೋಡಿ|

ಮೂಕನೋ ನಾನು ಶಾಸ್ತೃವಿದ್ಯೆಗಳ ಸಾಲಿನಲ್ಲಿ
ಕುರುಡು ಭಕ್ತಿಯ ತೋರಿ ಗುರುವ ನಂಬಿದೆನಿಲ್ಲಿ|

ಬೇಕು ಬೇಡಗಳ ಮೂಟೆ ಹೊತ್ತು ಹೊರಟ ಮೂಡ
ಕೆಳಗಿಳಿಸದೇ ನಿರಾಳವಾಗಿದೆ ಎನ್ನ ಎದೆಯ ಗೂಡ|
ಗುರುನಾಥ ಗಾನಾಮೃತ 
ನೀನಲ್ಲವೇ ಗುರುದೇವ ಸ್ತುತಿಪ ಎಲ್ಲರಾ ಮಹಾದೇವ
ರಚನೆ: ಆನಂದರಾಮ್, ಶೃಂಗೇರಿ  


ನೀನಲ್ಲವೇ ಗುರುದೇವ ಸ್ತುತಿಪ ಎಲ್ಲರಾ ಮಹಾದೇವ
ಶರಣು ಶರಣೆನ್ನಲು ಬವಬಂದನ ಕಳೆವ ಗುರುದೇವ|

ಪದಗಳಲೇ ಪೂಜಿಸಿ ನಿನ್ನ ಪಾದ ನೆನೆಸುತ ಬೇಡುವೆ
ಮನದಲೇ  ಅರ್ಚಿಸುತ ನಿನ್ನ ಪಾದವ ಪಿಡಿಯುವೆ|

ಹೃದಯ ಕಮಲದಲಿ ನೆಲೆ ನಿಲ್ಲೊ ಎನ್ನ ಗುರುವೇ
ಅಂತರಂಗದಲ್ಲಿ ನಾ ಬಾವ ಶುದ್ದಿ ಮಾಡಿ ಕೊಳ್ಳುವೇ|

ಬಕುತಿಯಲಿ ಕಡು ಬಡವನು ನಾನು ಎನ್ನ ಕರುನಿಸೊ
ಸದಾ ನಿನ್ನ ಬಜಿಸುವ ಕಾಯಕದಿ ಎನ್ನ ತೊಡಗಿಸೋ|

ತೋರಿಕೆಯ ಬಕುತಿಯದು ಎನಗೆ ಬೇಡ ಗುರುವೇ
ಯಾರಿಗೂ ಅರಿಯದಂತೆ ಬಕುತಿ ಮಾಡಿ ನಡೆವೆ|

ನಿನ್ನ ಮಹಿಮೆ ತಿಳಿದಾಗ ಆಸೆ ಹೊತ್ತು ನಿಂತೆನಯ್ಯಾ
ನೀ ನುಡಿದ ಪದಗಳಾ ಕೇಳಿ ನಾ  ಪಾಠ ಕಲಿತೆನಯ್ಯಾ|

ನಿನ್ನಣತಿ ಇಲ್ಲದೆ ಏನೂ ನಡೆಯದು ಎಂದರಿತೆ ನಾನು
ಇನ್ನು ನನ್ನ ಉದ್ದರಿಸುವ ಕೆಲಸ  ನಿನ್ನದಲ್ಲವೇನೋ|
ಗುರುನಾಥ ಗಾನಾಮೃತ 
ಬೃಂದಾವನದ ಒಳಗೆ ಕುಳಿತ ಸದ್ಗುರುವರ
ರಚನೆ: ಅಂಬಾಸುತ 

ಬೃಂದಾವನದ ಒಳಗೆ ಕುಳಿತ ಸದ್ಗುರುವರ
ಭಾವಿಕ ಭಕುತರ ಭವಬಂಧ ಹರಿಸುವಾ ಈತ ಹರ ||ಪ||

ಬಣ್ಣಿಸಲಾರೆ ಇವನ ಮಹಿಮೆ ಭಾವ ಸುಂದರ
ಭಾವಿಕಾ ಭಕುತರಾ ಮನವೆ ಈತನ ಮಂದಿರ ||೧||

ಸುಲಭಕೆ ಸಿಗುವವನಲ್ಲ ಸಾಧನೆಗೆ ಸಾಕಾರ
ಅಳಿಸುವವನು ತನು ಮನದ ಎಲ್ಲ ವಿಕಾರ ||೨||

ಲೋಕಚಿಂತೆ ಬಿಟ್ಟವರಿಗೆ ಕಂಡ ಸಾಹುಕಾರ
ಕೂಡಿ ಕಳೆದು ಕಲಿಸುವನು ಧರ್ಮದ ವ್ಯವಹಾರ ||೩||

ಕಲ್ಲಿಗೂ ಕರುಣೆ ತೋರೊ ಕೃಪಾಸಾಗರ
ಕಂಡವರಿಗೆಲ್ಲರಿಗೂ ಈತನೇ ಸುರ ಹರ ||೪||

ಲೀಲೆ ತೋರಿದನಿಲ್ಲಿ ಗುರು ಸಖರಾಯಪುರ
ಅಂಬಾಸುತನಿಗೆಂದಿಗೂ ಈತ ಗುರು ಹರಿ ಹರ ವರ ||೫||
ಗುರುನಾಥ ಗಾನಾಮೃತ 
ಸದ್ಗುರುನಾಥನಿಗರ್ಪಣೆ ಯಾತ್ರೆ
ರಚನೆ: ಅಂಬಾಸುತ 

ಸದ್ಗುರುನಾಥನಿಗರ್ಪಣೆ ಯಾತ್ರೆ
ಸದ್ಗುರುನಾಥನಿಗೆ ಅರ್ಪಣೆ ||ಪ||
ಸದ್ಗುರುನಾಥನಿಗೆ ಸಖರಾಯಪುರವಾಸಿಗೆ
ಆತ್ಮಸುಖವಾ ನೀಡೊ ಎನ್ನಾತ್ಮ ಸಖನಿಗೆ ||ಅ.ಪ||

ತನು ಮನವ ದಂಡಿಸಿ ತೋರುವಿಕೆಯಾ ಅಳಿಸಿ
ತಮ ತಾರತಮ್ಯವ ಅಳಿಸೊ ಅಡಿಯಿಟ್ಟಂತಹ ||೧||

ಪದರಕ್ಷೆ ಪಡೆದು ಬಾಹ್ಯ ಪಾದರಕ್ಷೆ ತೊರೆದು
ಗುರುವಿತ್ತ ಪದಗಳ ಪೋಣಿಸುತ ಬಂದಂತಹ ||೨||

ಜ್ಞಾನ ವೀಣೆಯ ಹಿಡಿದು ಲಯದ ತಾಳವ ಬಡಿದು
ಭಕ್ತಿ ಮಾರ್ಗದಿಂದಲಿ ಮುಕ್ತಿ ಮಂಟಪದತ್ತ ನೆಡೆವ ||೩||

ಪರಮಹಂಸರ ಕೃಪೆಯಿಂದ  ಪ್ರಾರಂಭಿಸಿ
ನಾಲ್ಕಾಶ್ರಮಾ ಮೀರಿದಾ ಅವಧೂತನೆಡೆಗೆ ನೆಡೆದ ||೪||

ಅಂಬೆಯ ಸುತನಾಗಿ ಆನಂದ ಬೇಡುತಲಿ
ಅಂತರಂಗದ ದೊರೆ ಅವಧೂತನ ಕಾಣ ಹೊರಟ ||೫||

Thursday, July 19, 2018

ಗುರುನಾಥ ಗಾನಾಮೃತ 
ಎಂಥಾ ಭಕುತನು ಕಂಡ್ಯಾ ನಾನು ಗುರುವೇ
ರಚನೆ: ಅಂಬಾಸುತ 

ಎಂಥಾ ಭಕುತನು ಕಂಡ್ಯಾ ನಾನು ಗುರುವೇ
ಸಂತೆ ವ್ಯಾಪಾರದ ನಡುವೆ ಒಮ್ಮೆ ನಿನ್ನನು ನೆನೆವೇ ||ಪ||

ತಡವಾಗಿ ಎದ್ದು ತಡಬಡಿಸಿ ಸ್ನಾನವ ಮಾಡಿ
ಕ್ಷಣಕಾಲ ನಿನ್ನೆದಿರು ನಿಂತು ನಾ ಹೊರಡುವೆ
ಅರ್ಥ ಗಳಿಸಲು ಮುದದಿ ಸ್ವಾರ್ಥ ಪರನಾಗುತಲಿ
ಆತ್ಮಸಖನೇ ನಿನ್ನ ಮರೆತಿರುವಂಥಾ ||೧||

ಕಷ್ಟವೆಂಬುದು ಬರಲು ನೀ ಕಾಯಲಿಲ್ಲವೆಂದು
ಜರಿಯುವೆ ಜನ್ಮವೆನಗೆ ಏಕಿತ್ತೆ ಎನುವೇ
ಸುಖದ ಕಾಲದಿ ಸತಿ ಸುತರ ಒಡಗೂಡುತಲಿ
ಹರುಷದಿ ನಿನ್ನನ್ನೇ ನೆನೆಯದಿರುವಂಥಾ ||೨||

ಉಂಬುವಾಗ ಉಡುವಾಗ ಉತ್ತಮಿಕೆ ಪಡೆವಾಗ
ಜಗದೊಳುತ್ತಮನೇ ನಿನ್ನ ಸ್ಮರಿಸಲಿಲ್ಲಾ
ಹೆಸರ ಪಡೆಯಲು ನಿನ್ನ ನಾಮವಾ ಜಪಿಸುವ
ಹೀನರೊಳಗತಿ ಹೀನ ಈತನು ||೩||

ಅಳಿಸೊ ನಾನೆಂಬುದಾ ಸಖರಾಯಪುರಾಧೀಶಾ
ಉಳಿಸೊ ನಿನ್ನಯತನವ ಎನ್ನೊಳಗೆ ಪ್ರಭುವೇ
ಅಂಬಾಸುತನ ಅರಿಕೆ ಇದುವೆ ಕೇಳೊ ಗುರುವೇ
ಉಸಿರುಸಿರಲು ನಿನ್ನ ನಾಮವೇ ಇರಲೈ ||೪||
ಗುರುನಾಥ ಗಾನಾಮೃತ 
ಸುದ್ಧಿ ಕಳುಹಿಸಿಹನೆಮ್ಮ ಗುರುನಾಥನೀಗ
ರಚನೆ: ಅಂಬಾಸುತ 

ಸುದ್ಧಿ ಕಳುಹಿಸಿಹನೆಮ್ಮ ಗುರುನಾಥನೀಗ
ಬದ್ಧರಾಗಿರಿ ನೀವು ಸಿದ್ಧರಾಗಿರಿ ನೀವು ಬುದ್ಧಿವಂತಾಗಿರಿ ನೀವು ಎನುತಾ ||ಪ||

ತಂದ ಹೊರೆ ಪುಣ್ಯದಿಂದ ಮಾನವರಾಗಿರುವಿರಿ
ತಂದೆ ತಾಯಿಯ ಮಮತೆಯಿಂದ ಸುಖಿಸಿರುವಿರಿ
ಮತ್ತೆ ಬಂಧು ಬಾಂಧವರ ಕೂಡಿ ನಲಿದಿರುವಿರಿ
ಮೆತ್ತಗಾಗುವ ಕಾಲ ಮುಂದಿದೆ ಮರೆಯದಿರಿ ಎಂದು ||೧||

ಹಗಲಿರುಳೆನ್ನದೆ ದುಡಿದು ಹಣ ಕೂಡಿಟ್ಟಿರುವಿರಿ
ಧನ ಧಾನ್ಯ ಸಂಪತ್ತ ಸಂರಕ್ಷಿಸಿರುವಿರಿ
ಅನುರಾಗ ಅನುಭಾವ ಅನುಭೋಗದಿಂದಿರುವಿರಿ
ಅನುಮಾನವಿಲ್ಲ ಅಪಮಾನ ಮುಂದಿಹುದೆಂದು ||೨||

ಮೆರೆಯದಿರಿ ಮುರಿಯದಿರಿ ಮನ್ನಿಸುವುದ ಮರೆತೀರಿ
ಮರಣವೆನಗಿಲ್ಲವೆಂದು ಮಾತನಾಡಿರುವೀರಿ
ಕಡಿಯೆ ಹೊರಟಿರುವಿರಿ ಕಳ್ಳತನ ಮಾಡಿದಿರಿ
ಕುಹಕವಾಡಿದ ನಿಮಗೆ ಕರ್ಮ ಕೂಡಿಹುದೆಂದು ||೩||

ಸಖರಾಯಪುರದಿಂದ ಸೂಚನೆ ಎಂಬಂತೆ
ಸದ್ಗುರುನಾಥನು ಆಗ್ರಹದಿಂದಲೀ
ಅಂಬಾಸುತಗೆ ಅರಿವಾ ನೀಡುತಾ ಈ ತೆರದಿ
ಶ್ರೀವೇಂಕಟಾಚಲ ನಾಮಾಂಕಿತ ಅವಧೂತಾ ||೪||
ಗುರುನಾಥ ಗಾನಾಮೃತ 
ವೇಂಕಟಾಚಲನೆಂಬ ಸಾಹುಕಾರ
ರಚನೆ: ಅಂಬಾಸುತ 

ವೇಂಕಟಾಚಲನೆಂಬ ಸಾಹುಕಾರ
ಸಖರಾಯಪುರದೊಳು ಅವನ ವ್ಯವಹಾರ ||ಪ||
ಭಕ್ತರ ಆತ್ಮೋದ್ಧಾರವೆ ಇಲ್ಲಿ ವ್ಯಾಪಾರ
ನಗದು ನಾಣ್ಯವೆಂಬುದಿಲ್ಲಿ ಆಚಾರ ವಿಚಾರ ||ಅ.ಪ||

ಮನದೊಳಗಿರಿಸದೆ ಇದ್ದರೆ ಯಾವುದೆ ವಿಕಾರ
ತೋರುವ ಆ ಸಾಹುಕಾರ ನಿಜ ಮಮಕಾರ
ಮರೆತು ಬಿಡಿ ಇಲ್ಲಿ ಭವದಾ ಸಮಾಚಾರ
ಎಮ್ಮನುದ್ಧರಿಸದೆ ಬಿಡನು ಆ ಗುರುವರ ||೧||

ಧೃಢಭಕ್ತಿ ಎಂಬುದೀ ವ್ಯವಹಾರಕೆ ಆಧಾರ
ಬಯಸನು ಸಾಹುಕಾರ ಎಂದಿಗೂ ಪ್ರಚಾರ
ಮೋಸ ವಂಚನೆ ಇಲ್ಲಿಗೆ ಬಾರದೊ ಬಾ ಧೀರ
ಆನಂದವೆಂಬುದು ಎಲ್ಲೆಂದಿಗೂ ಸ್ಥಿರ ||೨||

ಉಸುರುವನು ಗುರುವಿಲ್ಲಿ ಮೋಕ್ಷಸಾರ
ಸಾಹುಕಾರನಾ ಮಾತು ಮುತ್ತಿನಾ ಹಾರ
ಆ ಹಾರವೆ ನಮಗೆ ಲಾಭದ ಅಲಂಕಾರ
ಕರೆದು ತನ್ನಿರಿ ಬೇಗ ಇಲ್ಲಿಗೆ ಅರಿವಿರದವರ ||೩||

ಈ ಸಾಹುಕಾರನಿಂದ ಎಲ್ಲರಾ ಹಣೆಬರ
ಕಳೆದು ಅಳಿಸಿದನವ ಅಹಂಕಾರ
ಅಂಬಾಸುತನೆಂದಿಗೂ ಆ ಸಾಹುಕಾರನ ಅನುಚರ
ಅವನಿಂದಲೇ ಈ ಲೋಕದ ಉದ್ಧಾರ ||೪||
ಗುರುನಾಥ ಗಾನಾಮೃತ 
ಅರಸು ಅರಿವ ಅರಸು ಅರಿವ
ರಚನೆ: ಅಂಬಾಸುತ 

ಅರಸು ಅರಿವ ಅರಸು ಅರಿವ
ಅರಿತು ಅರಸನಾಗೊವರೆಗು ||ಪ||
ಮರೆತು ಬೆರೆತು ಕಲಿತು ಕುಳಿತು
ಕೇಳಿ ಹೇಳುವಾವರೆಗು ||ಅ.ಪ||

ನಿದಿರೆ ಬಿಟ್ಟು ಮದಿರೆ ಬಿಟ್ಟು
ಹೆದರಿ ಹೆದರಿಸುವುದಾ ಬಿಟ್ಟು
ಬೆರಗ ಮನಸಿನೊಳಗಿಟ್ಟು
ಸೊರಗಿ ಮರುಗಿ ಮೂಖನಾಗಿ ||೧||

ಸುಟ್ಟು ಆರು ಕಟ್ಟಿ ನೂರು
ಮೆಟ್ಟಿ ಮಟ್ಟ ಮಾಡಿ ಸೂರು
ಜಗಜ್ಜಟ್ಟಿ ಪಾದ ಗಟ್ಟಿ
ಪಿಡಿದು ಪಾವನನಾಗಿ ||೨||

ವಕ್ರತೆಗೆ ವಿರಾಮ ಹಾಕಿ
ಚಕ್ರದೊಡನೆ ತಿರುಗು ನೂಕಿ
ಸಕ್ರಮದಿ ಹಸಿವ ನೂಕಿ
ಏಕತಾನದಿ ಐಕ್ಯನಾಗಲು ||೩||

ಪದಕೆ ಪದ ಪೋಣಿಸುತಾ
ಗುರುಪದವ ಧ್ಯಾನಿಸುತಾ
ಅಂಬಾಸುತನ ಈ ಮಾತ ನೆನೆಯುತಾ
ಅಂಬಿಕೆಯೊಡಲಾಳ ಸೇರಲು ||೪||

Monday, July 16, 2018

ಗುರುನಾಥ ಸ್ತೋತ್ರ  ಕುಸುಮಾಂಜಲಿ 



ಸರ್ವವ್ಯಾಪಕಮಚಿಂತ್ಯಂ 
ಸರ್ವಮನೋವ್ಯಾಪಕಂ ಚ |
ಕಥಂ ಹಿ ನಮಸ್ಕರೋಮಿ 
ಕುತ್ರ ವಾತ್ರ ಪೂಜಯಾಮಿ ||

ಎಲ್ಲೆಡೆಯೂ ವ್ಯಾಪಿಸಿರುವ ಚಿಂತನೆಗೂ ನಿಲುಕದ ಸಕಲರ ಮನೋವ್ಯಾಪಕನಾದ ನಿನ್ನನ್ನು ಹೇಗೆ ನಮಸ್ಕರಿಸಲಿ  ... ಇಲ್ಲಿ ನಿನಗೆ ಅದೆಂತು ಪೂಜೆ ಸಲ್ಲಿಸಲಿ ..

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥಾಷ್ಟಕಂ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ವಿಬುಧಕೀರ್ತಿತಂ ವಂದ್ಯಪಾದುಕಂ
ಅಚಲಶಕ್ತಿದಂ ಮೋಹನಾಶಕಂ |
ಕರಣಶೋಧಕಂ ಕರ್ಮಬೋಧಕಂ
ಗುರುಪದಂ ಶಿವಂ ಸಂತತಂ ಭಜೇ ||
ವೇಂಕಟಾಚಲಂ ಗುರು ವೇಂಕಟಾಚಲಂ
ವೇಂಕಟಾಚಲಂ ಗುರು ವೇಂಕಟಾಚಲಂ || ೧ ||

ದಯರಿತವಾರಣಂ ದ್ವಂದ್ವನಾಶಕಂ 
ಭುವನವಂದಿತಂ ಭಾವಿಕಪ್ರಿಯಂ |
ಗಗನವಿಸ್ತೃತಂ ಗಮ್ಯದರ್ಶಕಂ
ಗುರುಪದಂ ಶಿವಂ ಸಂತತಂ ಭಜೇ || ೨ ||
ವೇಂಕಟಾಚಲಂ ಗುರು ವೇಂಕಟಾಚಲಂ 
ವೇಂಕಟಾಚಲಂ ಗುರು ವೇಂಕಟಾಚಲಂ 

ಸತತವೈಭವಂ ಸದ್ವಿಚಾರಿಣಂ
ಸಮಯಬೋಧಕಂ ಸದ್ಗತಿಪ್ರದಂ |
ಸಕಲತತ್ತ್ವದಂ ಸತ್ಯವಾದಿನಂ
ಗುರುಪದಂ ಶಿವಂ ಸಂತತಂ ಭಜೇ || ೩ ||
ವೇಂಕಟಾಚಲಂ ಗುರು ವೇಂಕಟಾಚಲಂ
ವೇಂಕಟಾಚಲಂ ಗುರು ವೇಂಕಟಾಚಲಂ

ಬುಧಜನಪ್ರಿಯಂ ಸೌಖ್ಯದಾಯಕಂ
ಅನಘದರ್ಶಕಂ ಸ್ಫೂರ್ತಿದಾಯಕಂ |
ವಿನಯಭೂಷಣಂ ವಾಂಛಿತಪ್ರದಂ 
ಗುರುಪದಂ ಶಿವಂ ಸಂತತಂ ಭಜೇ || ೪ ||
ವೇಂಕಟಾಚಲಂ ಗುರು ವೇಂಕಟಾಚಲಂ 
ವೇಂಕಟಾಚಲಂ ಗುರು ವೇಂಕಟಾಚಲಂ 

ಭಜನಮಾನಸಂ ಭಕ್ತವತ್ಸಲಂ
ಭಯನಿವಾರಣಂ ಬಂಧಮೋಚಕಂ !
ಲಲಿತವಾಗ್ಝರೀಂ ಲಾಲನಪ್ರಿಯಂ
ಗುರುಪದಂ ಶಿವಂ ಸಂತತಂ ಭಜೇ !! ೫ !!
ವೇಂಕಟಾಚಲಂ ಗುರು ವೇಂಕಟಾಚಲಂ
ವೇಂಕಟಾಚಲಂ ಗುರು ವೇಂಕಟಾಚಲಂ 

ಅರುಣಪೂಜಿತಂ ಶಾರದಾಸುತಂ
ಚರಣಸೇವಿತಂ ಚಾರುಶಬ್ದಿತಂ !
ಅಭಯದಾಯಕಂ ಕೃಷ್ಣರೂಪಿಣಂ
ಗುರುಪದಂ ಶಿವಂ ಸಂತತಂ ಭಜೇ !! ೬ !!
ವೇಂಕಟಾಚಲಂ ಗುರು ವೇಂಕಟಾಚಲಂ
ವೇಂಕಟಾಚಲಂ ಗುರು ವೇಂಕಟಾಚಲಂ 

ಪ್ರಣವರೂಪಿಣಂ ಪುಣ್ಯವರ್ಧನಂ
ಪ್ರಗತಿಕಾರಣಂ ಸಂಸ್ಕೃತಿಪ್ರಿಯಂ |
ಪ್ರಮತಿದಾಯಕಂ ಕ್ಲೇಶವಾರಕಂ
ಗುರುಪದಂ ಶಿವಂ ಸಂತತಂ ಭಜೇ || ೭ ||
ವೇಂಕಟಾಚಲಂ ಗುರು ವೇಂಕಟಾಚಲಂ 
ವೇಂಕಟಾಚಲಂ ಗುರು ವೇಂಕಟಾಚಲಂ

ಜಗತಿವೈಭವಂ ಸತ್ವರೂಪಿಣಂ
ಮನುಜಮಂದಿರಂ ಮುಕ್ತಿಕಾರಕಂ |
ಅತುಲಭಕ್ತಿಂ ಜ್ಞಾನಕಾರಕಂ
ಗುರುಪದಂ ಶಿವಂ ಸಂತತಂ ಭಜೇ || ೮ ||
ವೇಂಕಟಾಚಲಂ ಗುರು ವೇಂಕಟಾಚಲಂ 
ವೇಂಕಟಾಚಲಂ ಗುರು ವೇಂಕಟಾಚಲಂ