ಗುರುನಾಥ ಗಾನಾಮೃತ
ನೀನಲ್ಲವೇ ಗುರುದೇವ ಸ್ತುತಿಪ ಎಲ್ಲರಾ ಮಹಾದೇವ
ರಚನೆ: ಆನಂದರಾಮ್, ಶೃಂಗೇರಿ
ನೀನಲ್ಲವೇ ಗುರುದೇವ ಸ್ತುತಿಪ ಎಲ್ಲರಾ ಮಹಾದೇವ
ಶರಣು ಶರಣೆನ್ನಲು ಬವಬಂದನ ಕಳೆವ ಗುರುದೇವ|
ಪದಗಳಲೇ ಪೂಜಿಸಿ ನಿನ್ನ ಪಾದ ನೆನೆಸುತ ಬೇಡುವೆ
ಮನದಲೇ ಅರ್ಚಿಸುತ ನಿನ್ನ ಪಾದವ ಪಿಡಿಯುವೆ|
ಹೃದಯ ಕಮಲದಲಿ ನೆಲೆ ನಿಲ್ಲೊ ಎನ್ನ ಗುರುವೇ
ಅಂತರಂಗದಲ್ಲಿ ನಾ ಬಾವ ಶುದ್ದಿ ಮಾಡಿ ಕೊಳ್ಳುವೇ|
ಬಕುತಿಯಲಿ ಕಡು ಬಡವನು ನಾನು ಎನ್ನ ಕರುನಿಸೊ
ಸದಾ ನಿನ್ನ ಬಜಿಸುವ ಕಾಯಕದಿ ಎನ್ನ ತೊಡಗಿಸೋ|
ತೋರಿಕೆಯ ಬಕುತಿಯದು ಎನಗೆ ಬೇಡ ಗುರುವೇ
ಯಾರಿಗೂ ಅರಿಯದಂತೆ ಬಕುತಿ ಮಾಡಿ ನಡೆವೆ|
ನಿನ್ನ ಮಹಿಮೆ ತಿಳಿದಾಗ ಆಸೆ ಹೊತ್ತು ನಿಂತೆನಯ್ಯಾ
ನೀ ನುಡಿದ ಪದಗಳಾ ಕೇಳಿ ನಾ ಪಾಠ ಕಲಿತೆನಯ್ಯಾ|
ನಿನ್ನಣತಿ ಇಲ್ಲದೆ ಏನೂ ನಡೆಯದು ಎಂದರಿತೆ ನಾನು
ಇನ್ನು ನನ್ನ ಉದ್ದರಿಸುವ ಕೆಲಸ ನಿನ್ನದಲ್ಲವೇನೋ|
No comments:
Post a Comment