ಗುರುನಾಥ ಗಾನಾಮೃತ
ಸುದ್ಧಿ ಕಳುಹಿಸಿಹನೆಮ್ಮ ಗುರುನಾಥನೀಗ
ರಚನೆ: ಅಂಬಾಸುತ
ಸುದ್ಧಿ ಕಳುಹಿಸಿಹನೆಮ್ಮ ಗುರುನಾಥನೀಗ
ಬದ್ಧರಾಗಿರಿ ನೀವು ಸಿದ್ಧರಾಗಿರಿ ನೀವು ಬುದ್ಧಿವಂತಾಗಿರಿ ನೀವು ಎನುತಾ ||ಪ||
ತಂದ ಹೊರೆ ಪುಣ್ಯದಿಂದ ಮಾನವರಾಗಿರುವಿರಿ
ತಂದೆ ತಾಯಿಯ ಮಮತೆಯಿಂದ ಸುಖಿಸಿರುವಿರಿ
ಮತ್ತೆ ಬಂಧು ಬಾಂಧವರ ಕೂಡಿ ನಲಿದಿರುವಿರಿ
ಮೆತ್ತಗಾಗುವ ಕಾಲ ಮುಂದಿದೆ ಮರೆಯದಿರಿ ಎಂದು ||೧||
ಹಗಲಿರುಳೆನ್ನದೆ ದುಡಿದು ಹಣ ಕೂಡಿಟ್ಟಿರುವಿರಿ
ಧನ ಧಾನ್ಯ ಸಂಪತ್ತ ಸಂರಕ್ಷಿಸಿರುವಿರಿ
ಅನುರಾಗ ಅನುಭಾವ ಅನುಭೋಗದಿಂದಿರುವಿರಿ
ಅನುಮಾನವಿಲ್ಲ ಅಪಮಾನ ಮುಂದಿಹುದೆಂದು ||೨||
ಮೆರೆಯದಿರಿ ಮುರಿಯದಿರಿ ಮನ್ನಿಸುವುದ ಮರೆತೀರಿ
ಮರಣವೆನಗಿಲ್ಲವೆಂದು ಮಾತನಾಡಿರುವೀರಿ
ಕಡಿಯೆ ಹೊರಟಿರುವಿರಿ ಕಳ್ಳತನ ಮಾಡಿದಿರಿ
ಕುಹಕವಾಡಿದ ನಿಮಗೆ ಕರ್ಮ ಕೂಡಿಹುದೆಂದು ||೩||
ಸಖರಾಯಪುರದಿಂದ ಸೂಚನೆ ಎಂಬಂತೆ
ಸದ್ಗುರುನಾಥನು ಆಗ್ರಹದಿಂದಲೀ
ಅಂಬಾಸುತಗೆ ಅರಿವಾ ನೀಡುತಾ ಈ ತೆರದಿ
ಶ್ರೀವೇಂಕಟಾಚಲ ನಾಮಾಂಕಿತ ಅವಧೂತಾ ||೪||
No comments:
Post a Comment