ಗುರುನಾಥ ಗಾನಾಮೃತ 
ಮುನಿದು ಮುಖವ ಗಂಟಿಕ್ಕುವೆಯೋ
ರಚನೆ: ಅಂಬಾಸುತ 
ಮುನಿದು ಮುಖವ ಗಂಟಿಕ್ಕುವೆಯೋ
ಗುರುವೇ ನಿನಗೆ ಸರಿ ಇದು ಏನೋ?
ತರಳರ ತಪ್ಪನು ಮನ್ನಿಸದೆ
ಮೌನವಾಗಿರುವುದು ಸರಿಯೇನೋ? ||ಪ||
ಹುಡುಗುತನದಲಿ ತುಡುಕತನವ
ಗಡಬಡಿಸುತಲಿ ಮಾಡಿದೆನೆಂದು
ನೇಮ ಮುರಿದು ನಾರೀಮಣಿಯ
ಹೆಸರ ಹಿಡಿದು ಕೂಗಿದೆನೆಂದೂ ||೧||
ಹಸಿವ ತಡೆಯದೆ ಹುಸಿಯಾ ನುಡಿದು
ಕಸಿವಿಸಿಯಲಿ ಉಂಡೆನೆಂದು
ಮಡಿಯಲಿರದೆ ಮಾಧವನಾ
ಚರಣಕರ್ಚನೆ ಮಾಡಿದೆನೆಂದೂ ||೨||
ಪತ್ರೆ ತರಲು ಹೋಗುವೆನೆಂದು
ಪಾಠ ಬಿಟ್ಟು ಹೋದೆನೆಂದು
ಪದವ ಜೋಡಿಸೊ ಗೀಳಲಿ ಬಿದ್ದು
ಪಾದಸೇವೆಯ ಮರೆತೇನೆಂದೂ ||೩||
ಸಖರಾಯಪುರವಾಸನೆ ನಿನ್ನ
ಸಖನೆಂದು ಕರೆದೇನೆಂದು
ಅಂಬಾಸುತನ ಪದಗಳೊಳಗಿನ
ಭಾವವನ್ನು  ಅರಿಯೆ ಎಂದೂ ||೪||

No comments:
Post a Comment