ಒಟ್ಟು ನೋಟಗಳು

Thursday, July 26, 2018

ಗುರುನಾಥ ಗಾನಾಮೃತ 
ಭೋಗಿಯಲ್ಲವೊ ಎನ್ನ ಗುರುನಾಥ
ರಚನೆ: ಅಂಬಾಸುತ 

ಭೋಗಿಯಲ್ಲವೊ ಎನ್ನ ಗುರುನಾಥ
ಭವರೋಗ ಹರಿಸುವ ವಿರಾಗಿ ಮಹಾಯೋಗಿ ||ಪ||

ಅರಿಯದವನಾ ಅರಿವಿಗೆ ಇವ ಸಂಸಾರಿ
ಅರಿತವರಿಗೆ ಇವನೇ ಮುರಾರಿ
ಲೋಕಬಂಧವಿರದ ನಾಕದ ಅಧಿಕಾರಿ
ಸೋಹಂಭಾವದಿಂದಿರುವ ಮನಸಂಚಾರಿ ||೧||

ಮಗುವಾಗಿ ನಕ್ಕಾನೊಮ್ಮೆ ಗದರಿಸಿ ನುಡಿದಾನೊಮ್ಮೆ
ಲಘುತನವ ಗುರುವಾಗಿ ಅಳಿಸಿಹನೆ
ಹಂಗಿರದ ರಂಗಿರದ ಸತ್ಸಂತದೊಡೆಯಾನು
ಮಂಗಮಾಯವಾಗೊ ದೇಹ ಭಾವಾವ ಕಳೆದಾನೊ ||೨||

ಆನಂದರೂಪ ನಿಜಾನಂದ ನೀಡುತಾ
ಜಗದಾನಂದದ ಸವಿಯನ್ನೇ ಉಣಿಸ್ಯಾನೊ
ಮಾಯಾಪಾಶಗಳ ಮರೆಮಾಚಿಸೀ ಬೇಗ
ಮಹಾದೇವ ತಾನಾಗೇ ಎಮಗೆ ಕಂಡ್ಯಾನೊ ||೩||

ಸಖರಾಯಪಟ್ಟಣದೊಳಗೆ ಮೆರೆಯುತ್ತಾ
ಸಖರಾಗಿ ಸತ್ಶಿಷ್ಯರನು ಪೊರೆದಾನು
ಅಂಬಾಸುತನಿಂ ನಿತ್ಯ ಪದಸೇವೆ ಪಡೆಯುತ್ತಾ
ಪಾದಪಂಕಜದ ದರುಶನ ನೀಡ್ಯಾನು ||೪||

No comments:

Post a Comment