ಒಟ್ಟು ನೋಟಗಳು

Thursday, July 26, 2018

ಗುರುನಾಥ ಗಾನಾಮೃತ 
ಹರಿವಾಣ ಸೇವೆಯ ನಿನಗೆ ಅರ್ಪಿಸುವೆನು ಹರಸೊ ಗುರುವೆ
ರಚನೆ: ಅಂಬಾಸುತ 

ಹರಿವಾಣ ಸೇವೆಯ ನಿನಗೆ ಅರ್ಪಿಸುವೆನು ಹರಸೊ ಗುರುವೆ
ಹರಿಯು ನೀನೇ ಹರನು ನೀನೇ ಅಜನು ನೀನೇ ಎನ್ನುತ್ತಾ ||ಪ||

ಅಭಿಷೇಕ ಅಲಂಕಾರ ನಿವೇದನೆ ಆರತಿಗಳ ಮಾಡಿ
ಸಡಗರದಿ ಸಂಭ್ರಮದಿ ಸರ್ವ ಭಕ್ತರನ್ನೊಡಗೂಡೀ ||೧||

ಧೇಹಿ ಧೇಹಿ ಎನುತಾ ಕರವ ಚಾಚಿ ನಿನ್ನಡಿಯಲ್ಲೀ ಬೇಡಿ
ಸೇವೆ ಮಾಡುವೆ ಸೇವ್ಯ ಸೇವಕ ಭಾವವೀಯೊ ಗುರುವೇ ಎನುತಾ ||೨||

ಬಂಗಾರದ ಹರಿವಾಣದಲಿ ನಿನ್ನ ಪದಪಂಕಜದೊಳಗಿಟ್ಟಾ
ತುಳಸಿ ಪತ್ರೆ ಪುಷ್ಪಗಳನು ಇರಿಸಿ ಶಿರದ ಮೇಲೆ ಹೊತ್ತು  ||೩||

ತಾಳ ವೀಣೆಯ ಧರಿಸೀ ಕರದಿ ನಿನ್ನ ನಾಮವ ಪಾಡುತಲಿ
ಲಯಗೊಳಿಸೊ ನಿನ್ನೊಳಗೆನ್ನಾ ಎನುತ ಲಯಬದ್ದನಾಗಿ ||೪||

ಸಖರಾಯಪುರವಾಸಿ ಗುರುವೇ ಅಂಬಾಸುತನಾ ದೊರೆಯೇ
ಸರ್ವ ಸೇವೆಯ ಅರ್ಪಿಸುವೆನೊ ಸಂತ ಸೇವೆಯ ಎನಗೀಯೋ ||೫||

No comments:

Post a Comment