ಗುರುನಾಥ ಗಾನಾಮೃತ
ವೇಂಕಟಾಚಲನೆಂಬ ಸಾಹುಕಾರ
ರಚನೆ: ಅಂಬಾಸುತ
ವೇಂಕಟಾಚಲನೆಂಬ ಸಾಹುಕಾರ
ಸಖರಾಯಪುರದೊಳು ಅವನ ವ್ಯವಹಾರ ||ಪ||
ಭಕ್ತರ ಆತ್ಮೋದ್ಧಾರವೆ ಇಲ್ಲಿ ವ್ಯಾಪಾರ
ನಗದು ನಾಣ್ಯವೆಂಬುದಿಲ್ಲಿ ಆಚಾರ ವಿಚಾರ ||ಅ.ಪ||
ಮನದೊಳಗಿರಿಸದೆ ಇದ್ದರೆ ಯಾವುದೆ ವಿಕಾರ
ತೋರುವ ಆ ಸಾಹುಕಾರ ನಿಜ ಮಮಕಾರ
ಮರೆತು ಬಿಡಿ ಇಲ್ಲಿ ಭವದಾ ಸಮಾಚಾರ
ಎಮ್ಮನುದ್ಧರಿಸದೆ ಬಿಡನು ಆ ಗುರುವರ ||೧||
ಧೃಢಭಕ್ತಿ ಎಂಬುದೀ ವ್ಯವಹಾರಕೆ ಆಧಾರ
ಬಯಸನು ಸಾಹುಕಾರ ಎಂದಿಗೂ ಪ್ರಚಾರ
ಮೋಸ ವಂಚನೆ ಇಲ್ಲಿಗೆ ಬಾರದೊ ಬಾ ಧೀರ
ಆನಂದವೆಂಬುದು ಎಲ್ಲೆಂದಿಗೂ ಸ್ಥಿರ ||೨||
ಉಸುರುವನು ಗುರುವಿಲ್ಲಿ ಮೋಕ್ಷಸಾರ
ಸಾಹುಕಾರನಾ ಮಾತು ಮುತ್ತಿನಾ ಹಾರ
ಆ ಹಾರವೆ ನಮಗೆ ಲಾಭದ ಅಲಂಕಾರ
ಕರೆದು ತನ್ನಿರಿ ಬೇಗ ಇಲ್ಲಿಗೆ ಅರಿವಿರದವರ ||೩||
ಈ ಸಾಹುಕಾರನಿಂದ ಎಲ್ಲರಾ ಹಣೆಬರ
ಕಳೆದು ಅಳಿಸಿದನವ ಅಹಂಕಾರ
ಅಂಬಾಸುತನೆಂದಿಗೂ ಆ ಸಾಹುಕಾರನ ಅನುಚರ
ಅವನಿಂದಲೇ ಈ ಲೋಕದ ಉದ್ಧಾರ ||೪||
No comments:
Post a Comment