ಒಟ್ಟು ನೋಟಗಳು

Tuesday, July 24, 2018

ಗುರುನಾಥ ಗಾನಾಮೃತ 
ಹೊರಟೆ ನಾನು ಸಖರಾಯಪುರಕೆ ಬಲು ಸಂಭ್ರಮದಿ 
ರಚನೆ: ಆನಂದರಾಮ್, ಶೃಂಗೇರಿ  


ಹೊರಟೆ ನಾನು ಸಖರಾಯಪುರಕೆ ಬಲು ಸಂಭ್ರಮದಿ 
ಗುರುವ ಕಂಡು ಬೇಡಿ ಬರಲು ಬಲು ಹಂಬಲದಿ|

ದಾರಿ ಸವೆಸಿ ಭಕ್ತಿ ಬಾವದಿ ಗುರುವೇ ನಿನ್ನ  ನೆನೆಯುತ 
ಹೆಜ್ಜೆ ಹೆಜ್ಜೆಗೂ ನೀವೇ ಕಾಯಬೇಕು ನನ್ನ ಎನ್ನುತಾ|

ದಣಿವಿಲ್ಲಾ ಈ ದೇಹಕೆ ಎಷ್ಟು ಬಜಿಸಿದರು ಎನುತ
ಅರಿವಿಲ್ಲ ನೋವಿನ ಸುಳಿವಿಲ್ಲ ನೆನೆಸಿದರೆ ಹಾಡುತ |

ಮೂಡನೋ ನಾನು ಬಕುತಿಯ ಗುಟ್ಟು ತಿಳಿದಿಲ್ಲ
ಬರೀ ನೋಡಿ ಕೇಳಿ ನಂಬಿ ನಡೆವ ಭಕ್ತಿ ಇದೆಲ್ಲಾ|

ಸಣ್ಣವನಾದೆನು ನಾ ಗುರುಬಂದುಗಳ ಜೊತೆಗೂಡಿ
ಹೆಚ್ಚು ಅರಿತೆನೋ ನಿಜ ಬಕುತಿಯ ಮಾಡಿ ನೋಡಿ|

ಮೂಕನೋ ನಾನು ಶಾಸ್ತೃವಿದ್ಯೆಗಳ ಸಾಲಿನಲ್ಲಿ
ಕುರುಡು ಭಕ್ತಿಯ ತೋರಿ ಗುರುವ ನಂಬಿದೆನಿಲ್ಲಿ|

ಬೇಕು ಬೇಡಗಳ ಮೂಟೆ ಹೊತ್ತು ಹೊರಟ ಮೂಡ
ಕೆಳಗಿಳಿಸದೇ ನಿರಾಳವಾಗಿದೆ ಎನ್ನ ಎದೆಯ ಗೂಡ|

No comments:

Post a Comment