ಗುರುನಾಥ ಗಾನಾಮೃತ
ಬೃಂದಾವನದ ಒಳಗೆ ಕುಳಿತ ಸದ್ಗುರುವರ
ರಚನೆ: ಅಂಬಾಸುತ
ಬೃಂದಾವನದ ಒಳಗೆ ಕುಳಿತ ಸದ್ಗುರುವರ
ಭಾವಿಕ ಭಕುತರ ಭವಬಂಧ ಹರಿಸುವಾ ಈತ ಹರ ||ಪ||
ಬಣ್ಣಿಸಲಾರೆ ಇವನ ಮಹಿಮೆ ಭಾವ ಸುಂದರ
ಭಾವಿಕಾ ಭಕುತರಾ ಮನವೆ ಈತನ ಮಂದಿರ ||೧||
ಸುಲಭಕೆ ಸಿಗುವವನಲ್ಲ ಸಾಧನೆಗೆ ಸಾಕಾರ
ಅಳಿಸುವವನು ತನು ಮನದ ಎಲ್ಲ ವಿಕಾರ ||೨||
ಲೋಕಚಿಂತೆ ಬಿಟ್ಟವರಿಗೆ ಕಂಡ ಸಾಹುಕಾರ
ಕೂಡಿ ಕಳೆದು ಕಲಿಸುವನು ಧರ್ಮದ ವ್ಯವಹಾರ ||೩||
ಕಲ್ಲಿಗೂ ಕರುಣೆ ತೋರೊ ಕೃಪಾಸಾಗರ
ಕಂಡವರಿಗೆಲ್ಲರಿಗೂ ಈತನೇ ಸುರ ಹರ ||೪||
ಲೀಲೆ ತೋರಿದನಿಲ್ಲಿ ಗುರು ಸಖರಾಯಪುರ
ಅಂಬಾಸುತನಿಗೆಂದಿಗೂ ಈತ ಗುರು ಹರಿ ಹರ ವರ ||೫||
No comments:
Post a Comment