ಗುರುನಾಥ ಗಾನಾಮೃತ
ಬರೆಯಲಾರೆ ಪದಗಳಲ್ಲಿ ನುಡಿಯಲಾರೆ ಮಾತಿನಲ್ಲಿ
ರಚನೆ: ಆನಂದರಾಮ್, ಶೃಂಗೇರಿ
ಬರೆಯಲಾರೆ ಪದಗಳಲ್ಲಿ ನುಡಿಯಲಾರೆ ಮಾತಿನಲ್ಲಿ
ಮೌನದಲ್ಲಿ ಲೀನನಾಗಿ ಗುರುವೇ ನಿನ್ನ ಧ್ಯಾನದಲ್ಲಿ ಮುಳುಗಿ ಹೋದೆನೋ|
ಬರೆದು ಬರೆದು ಸೋತೆನೋ ಮನಸು ಭಾರವಾಗಿ ನೊಂದೆನೋ
ನಿನ್ನ ಕರುಣೆ ಪಡೆಯಲಾರದೆ ನೊಂದು ಗುರುವೇ ನಿನ್ನ ಕೂಗಿ ಕರೆದೆನೋ |
ಹುಚ್ಚು ಮನವ ನಿಲ್ಲಿಸದೆ ಎಲ್ಲೆ ಮೀರಿ ಓಡುತಿದೆ ಕರ್ಮ ಮಾಡುತಿದೆ
ಸುಳ್ಳ ನುಡಿಯ ನುಡಿಸಿ ಮನವು ಬದುಕ ಮಲಿನ ಮಾಡಿದೆ |
ನುಡಿವಮಾತು ಬೇರೆ ನಡೆವ ಕರ್ಮ ಬೇರೆ ಬದುಕು ಮಿಥ್ಯೆಯೆನಿಸಿದೆ
ತೋರಿಕೆಯೇ ಮೆರೆಯುತಿದೆ ಬಕುತಿ ಮರೆಯಾಗಿ
ಅಹಂ ಎದ್ದು ನಿಂತಿದೆ|
ಗುರುವೇ ನಿನ್ನ ನಂಬಿ ನಡೆದರೆ ಬದುಕ ದಾರಿ ಸುಗಮವೋ
ಗುರುವೇ ಎಲ್ಲಾ ನೀನೆ ಎನ್ನದೇನು ಇಲ್ಲವೆಂದೆ ಬದುಕು ಹಸನವೋ|
ನಿನ್ನ ಕರುಣೆಗಾಗಿ ಹಂಬಲಿಸಿ ನಿತ್ಯ ನಿನ್ನ ನೆನೆವೆನೋ ಗುರುವೇ
ಮನವ ಶುದ್ದಗೊಳಿಸಿ ತನುವು ನಿನ್ನ ಸೇವೆ ನಡೆಸಿ ಧನ್ಯವಾಗಲಿ|
No comments:
Post a Comment