ಗುರುನಾಥ ಗಾನಾಮೃತ
ನಿನ್ನ ಮುಂದೆ ನಿಂತೆನೋ ಎನೂ ಅರಿಯದಾದೆನೋ
ಗುರುವೇ
ರಚನೆ: ಆನಂದರಾಮ್, ಶೃಂಗೇರಿ
ನಿನ್ನ ಮುಂದೆ ನಿಂತೆನೋ ಎನೂ ಅರಿಯದಾದೆನೋ ಗುರುವೇ
ಕೈ ಹಿಡಿಯುವೆಯೋ ಕೈ ಬಿಡಿಯುವೆಯೋ ಒಂದೂ ತಿಳಿಯದಾದೆನೋ|
ಬೇಡಲು ಬಯವೋ ಗುರುವೇ ಕೈ ಮುಗಿದು ಮೌನದಿ ನಿಂತಿಹಿನೋ
ಮನದಿ ತುಂಬಿದ ದುಗುಡವ ಹೊರಲಾಗದೆ ಹೆದರಿ ಹೋಗಿಹೆನೋ|
ಹೇಗೆ ಪೂಜಿಸಲು ನೀ ಒಲಿದು ಎನ್ನ ಮನವ ತುಂಬುವೆಯೋ
ಏನು ಅರ್ಪಿಸಲಿ ನಿನಗೆ ಗುರುವೇ ಪಲವೋ ಪಂಚಾಮೃತವೋ|
ಶುದ್ದ ಬಾವ ಬೇಕೆನ್ನುವೆ ಗುರುವೇ ನೀನು ಅದು ನನ್ನಲಿಲ್ಲವೋ
ನಿನ್ನ ಕರುಣೆ ಬೇಕೆನ್ನುವ ನಾನು ನಿನ್ನನು ಬೇಡಿ ಫಲವಿಲ್ಲವೋ|
ಸಂಸಾರ ನೌಕೆಯಲಿ ಸಾಗುತ ನಡೆವ ಕರ್ಮಕೆ ನಾನೇ ಹೊಣೆಯೋ
ನನ್ನನೇ ನಿನ್ನ ಪದಕಮಲಕೆ ಅರ್ಪಿಸಿರೆ ಎನಗೆ ಇನ್ಯಾತರ ಭಯವಿಲ್ಲವೋ|
No comments:
Post a Comment