ಗುರುನಾಥ ಗಾನಾಮೃತ
ಮನುಜ ಜನುಮ ಬಹು ದುರ್ಲಬವು ಅರಿಯಿರೋ
ರಚನೆ: ಆನಂದರಾಮ್, ಶೃಂಗೇರಿ
ಮನುಜ ಜನುಮ ಬಹು ದುರ್ಲಬವು ಅರಿಯಿರೋ
ಸಾಧಿಸಿ ಮೇಲೇರಿ ಎಂದನು ಗುರುವು ತಿಳಿಯಿರೋ|
ಎಲ್ಲಾ ಬ್ರಹ್ಮಮಯವು ಭೇದವೇತಕೋ ಎಂದರೋ
ಕಾಣದೆ ಚೈತನ್ಯವ ಪರತಪಿಸುವೆಯಾಕೆ ಎಂದರೋ|
ಹರಿಕಾರ ಗುರಿಕಾರ ನೀನಲ್ಲ ಬರೀ ನೆಪ ಮಾತ್ರವೋ
ಅವನ ಪ್ರೇರಣೆಯ ಬಲದಿ ನಟಿಪ ಕಲಾಕಾರನೋ|
ಮನವ ಲಯಮಾಡಿ ಬಲುಆನಂದವ ಸವಿಯಿರೋ
ನಿರ್ಗುಣ ನಿರ್ವಿಕಾರನ ಅನಂತ ಮಹಿಮನ ಅರಿಯಿರೋ|
ಸಂಸಾರನೌಕೆಯಲಿ ಸಾಗುತ ನಿಮ್ಮ ಅರಿವ ಪಡೆಯಿರೋ
ಯಾವುದೂ ನಿಮದಲ್ಲವೆಂಬ ಸತ್ಯವ ಅರಿಯೀರೋ|
ನಿಮ್ಮ ಕಾರ್ಯವು ಅವನ ಅಣತಿಯಂತೆ ತಿಳಿಯಿರೋ
ಜೀವನ ನಾಟಕದ ಹರಿಕಾರ ಸೂತ್ರದಾರ ಅವನೆನ್ನಿರೋ|
ಮರು ಮಾತನಾಡದೆ ಮಹಾದೇವನಾ ನಂಬಿರೋ
ಬವ ಬಂದನ ಕಳಚಿ ಮುಕ್ತಿ ಕಾಣುವ ಮಾರ್ಗವಾ ಅರಿಯೀರೋ||
No comments:
Post a Comment