ಗುರುನಾಥ ಗಾನಾಮೃತ
ಏಕೆ ಮೌನವಾಗಿಹೆ ಗುರುವೇ ಎನ್ನ ಮೊರೆ ಕೆಳದೇ ಗುರುವೇ
ರಚನೆ: ಆನಂದರಾಮ್, ಶೃಂಗೇರಿ
ಏಕೆ ಮೌನವಾಗಿಹೆ ಗುರುವೇ ಎನ್ನ ಮೊರೆ ಕೆಳದೇ ಗುರುವೇ
ನಿನ್ನದೇ ಧ್ಯಾನದಲಿ ಮನವು ಮುಳುಗಿಹುದು ದಯೆ ತೋರು ಗುರುವೇ|
ಚಿತ್ತವು ನಿನ್ನಲೇ ನೆಲೆ ನಿಲ್ಲಲಿ ವಿತ್ತದ ಹಿಂದೆ ಹೋಗದಿರಲಿ
ಕಡುಬಡವನಾದರೂ ಚಿಂತೆಇಲ್ಲಾ ಬಕುತಿಯಲಿ ಸಿರಿವಂತನ ಮಾಡು ಗುರುವೇ|
ಮನವು ಬಯಸುವುದು ಲೌಕಿಕದ ಎಲ್ಲಾ ಸುಖವನು ದಿನವೂ
ಎಲ್ಲೆ ಮೀರಿ ಹೋಗದಿರಲಿ ಆಸೆಯು ನಿನ್ನ ನಿಗವು ಎನ್ನ ಮೇಲಿರಲಿ ಗುರುವೇ|
ಸಂಸಾರ ಬಂಧನದ ಸುಳಿಯಲಿ ಸಿಲುಕಿ ನಿನ್ನ ಮರೆತನೇ ನಾನು
ಎನ್ನ ಮನ್ನಿಸಿ ನಿನ್ನೊಳು ಎನ್ನ ಮನ ನಿಲ್ಲುವಂತೆ ಮಾಡೋ ಗುರುವೇ|
ಬಕುತಿಯ ಸೋಗಿನಲಿ ಎನ್ನ ಸ್ವಾರ್ಥವ ಮುಂದಿಟ್ಟು ನಿನ್ನ ಬೇಡಿದೆನು
ಎನ್ನ ಮನ್ನಿಸಿ ನಿನ್ನವನೆಂದು ಕನಿಕರಿಸಿ ಹರಸೋ ನನ್ನ ಗುರುವೇ|
ಸಕಲವೂ ತಿಳಿದ ದೇವನು ಸಕರಾಯಪುರದಿ ನೆಲೆಸಿಹೆ ನೀನು
ಸಕಲ ಬಕುತರ ನಿತ್ಯವೂ ಸಲಹುವ ನೀನು ಎನ್ನನೂ ಸಲಹು ಗುರುವೇ|
No comments:
Post a Comment