ಗುರುನಾಥ ಗಾನಾಮೃತ
ನಿತ್ಯ ನಿಮ್ಮ ಬಜಿಪೆ ಗುರುವೇ ನಿತ್ಯ ನಿಮ್ಮ ಸ್ತುತಿಪೆ ಗುರುವೇ
ರಚನೆ: ಆನಂದರಾಮ್, ಶೃಂಗೇರಿ
ನಿತ್ಯ ನಿಮ್ಮ ಬಜಿಪೆ ಗುರುವೇ ನಿತ್ಯ ನಿಮ್ಮ ಸ್ತುತಿಪೆ ಗುರುವೇ
ಅಂತರಾಳದಿ ನೆಲೆ ನಿಂತ ನನ್ನದೆಂಬ ಬಾವ ಅಳಿಸಿ ಉದ್ಡರಿಸೋ ಗುರುವೇ|
ಬವರೋಗ ವೈದ್ಯ ನೀನು ಮೂಡ ಮನದ ಕ್ಲೇಶ ದೂರ ಮಾಡೋ
ದೃಷ್ಟಿಹೀನ ನಾನು ಸರಿ ತಪ್ಪುಗಳ ಭೇದ ಅರಿಯದಾದೆನೊ ಗುರುವೇ|
ಸುಳ್ಳು ನುಡಿಯು ನಿನ್ನ ಮುಂದೆ ನಡೆಯಲಾರದೋ ಗುರುವೇ
ಉಗ್ರನಾಗಿ ನುಡಿವಮಾತು ಬದುಕ ದಾರಿ ತೋರಿ ನಡೆಸಿದೆ ಗುರುವೇ|
ದಯಾಮಯ ಗುರುವೇ ನೀನು ಪಾದಸೇವೆ ಭಾಗ್ಯ ನೀಡೋ ಗುರುವೇ
ಎನ್ನ ಶಿರವ ನಿನ್ನ ಪಾದಕಮಲದಡಿ ಇಡುವೆ ಮನ್ನಿಸಿ ಎನ್ನ ಹರಸು ಗುರುವೇ|
ಆಚಾರ ವಿಚಾರಗಳರಿವು ಈ ಮನಕೆ ಇನ್ನೂ ಇಲ್ಲ ಗುರುವೇ
ಮೌನದಿಂದ ನಿನ್ನ ಮುಂದೆ ಶಿರವಬಾಗಿ ಶರಣಾಗುವೆ ಓ ನನ್ನ ಗುರುವೇ|
No comments:
Post a Comment