ಗುರುನಾಥ ಗಾನಾಮೃತ
ಎಲ್ಲರಂತಲ್ಲಾ ನನ್ನ ಗುರುದೇವ ಬಲು ಕರುಣಾಳುವೋ
ರಚನೆ: ಆನಂದರಾಮ್, ಶೃಂಗೇರಿ
ಎಲ್ಲರಂತಲ್ಲಾ ನನ್ನ ಗುರುದೇವ ಬಲು ಕರುಣಾಳುವೋ
ಬಲು ಸಜ್ಜನನೋ ಬಲು ಸರಳನೋ ನಮ್ಮ ಗುರುನಾಥನೋ|
ದೇಹಿ ಎಂದವರ ಎಂದೂ ಕೈ ಬಿಡನೊ ನಮ್ಮ ಗುರುವರನು
ಪರಿಹರಿಸಿ ನೋವುಗಳ ಕ್ಷಣಮಾತ್ರದಿ ಗುರುನಾಥನು|
ಬುದ್ದಿ ಹೇಳುತ ಶುದ್ದ ಮನಸ ಕೊಂಡಾಡುತಾ ಹರಸುವನು
ಅನ್ಯರ ಗೊಡವೆ ಭೇಡೆನ್ನುತ ಸತ್ಯವರಿತು ಬಾಳೆಂದ ಗುರುನಾಥನು|
ತಂದೆ ತಾಯಿಯ ಗೌರವದಿ ಬಾಳಿಸೆಂದನೋ ಗುರುವು
ಮನ ನೋಯಿಸದೆ ಒಡ ಹುಟ್ಟಿದವರೊಡಗೂಡಿ ಬಾಳೆಂದರು|
ಬದುಕಲಿ ಮಾನ ಅಪಮಾನ ಎರಡನು ಸಮಬಾವದಿ ಕಾಣೆಂದರು
ಎಲ್ಲವನು ಅವಗರ್ಪಿಸಿ ಎನದೇನು ಇಲ್ಲವೆಂದೆನುತ ಬಾಳೆಂದರೋ|
ನಡೆದಾಡಿದ ದೇವ ಇವನು ಎಲ್ಲರೊಳ ಒಬ್ಬನಾಗಿ ದಾರಿ ತೋರಿದನೋ
ನಂಬಿ ಬರುವ ಬಕುತರ ನೋವ ತಾ ನುಂಗಿ ಮಹಾದೇವನಾದನೋ|
No comments:
Post a Comment