ಗುರುನಾಥ ಗಾನಾಮೃತ
ಎನ್ನ ಗುರುನಾಥನೇ ಸದಾ ಎನ್ನ ಕಾಯುವನು ಮನವೇ
ರಚನೆ: ಆನಂದರಾಮ್, ಶೃಂಗೇರಿ
ಎನ್ನ ಗುರುನಾಥನೇ ಸದಾ ಎನ್ನ ಕಾಯುವನು ಮನವೇ
ಇನ್ನು ಯಾತಕೆ ಭಯವು ಅವನಲೇ ಲೀನನಾಗು ಮನವೇ|
ಪೊಳ್ಳು ಮಾತುಗಳ ನೀ ನಂಬದೆ ಅವನನೇ ನಂಬು ಮನವೇ
ನಿತ್ಯ ನಿರಂತರ ಸತ್ಯವು ಅವನ ಇರುವು ಕೇಳೋ ಮನವೇ|
ಭಯ ಭೀತನಾಗಬೇಡ ಅನ್ಯರಿಗೆ ಅಂಜಿ ಬದುಕ ಬೇಡ ಮನವೇ
ನಿತ್ಯ ಅವನನೇ ನೆನೆಯುತ ಸುಂದರ ಸತ್ಯವ ನೀ ಅರಿಯೊ ಮನವೇ|
ಅವನ ಪಾದವ ಮನದಿ ತುಂಬಿ ಬಹು ಬಕುತಿಯ ಮಾಡು ಮನವೇ
ಮಕುತಿಯ ನೀಡುವ ಆ ಪಾದವೇ ಮಹಾದೇವನ
ಪಾದ ತಿಳಿ ಮನವೇ|
ತುಂಡು ಉಡುಗೆಯ ದೊರೆಯೋ ಮಹಾ ಮಹಿಮನೋ ಮನವೇ
ದಟ್ಟ ದಾರಿದ್ರವ ಹೊಡೆದೋಡಿಸುವ ಮಹಾ ಪುರುಷನೋ ಮನವೇ|
ಎಲ್ಲರೊಳಗೂಡಿ ತನ್ನ ಕೆಲಸವ ಮಾಡಿ ಸುಮ್ಮನಿರುವನೋ ಮನವೇ
ಹೃದಯ ತುಂಬಿ ಕೂಗಿದಾಗ ಓಗೊಡುವನೊ ಮನವೇ|
ಎನೂ ಬಯಸದ ಗುರು ಇವನು ಸರ್ವರನೂ ಕಾಯ್ವನು ಮನವೇ
ನೀ ಎತ್ತಲಾದರೂ ಸಾಗು ನಾ ಗುರುವ ನಂಬಿ ನಡೆವೆ ಓ ನನ್ನ ಮನವೇ|
No comments:
Post a Comment