ಒಟ್ಟು ನೋಟಗಳು

Friday, April 27, 2018

ಗುರುನಾಥ ಗಾನಾಮೃತ 
ಈ ಮನವು ನಿನ್ನದು ಮನದೊಳಗಿನ ಭಾವ ನಿನ್ನದು
ರಚನೆ: ಆನಂದರಾಮ್, ಶೃಂಗೇರಿ  


ಈ ಮನವು ನಿನ್ನದು ಮನದೊಳಗಿನ ಭಾವ ನಿನ್ನದು
ತನು ನಿನ್ನದು ಈ ತನುವಿನೊಳಗಿನ ಜೀವ ನಿನ್ನದು|

ಇನ್ನೇಕೆ ತಡ ಮಾಡುವೆ ಗುರುವೇ ಸರಿ ದಾರಿ ತೋರು
ಮುಳ್ಳುತುಂಬಿದ  ದಾರಿ ಆದರೇನು ನಿನ್ನಣತಿಯಂತೆ
ಹೂ ಹಸಿರು ಇದ್ದರೂ ಸರಿ ಅದು ನಿನ್ನ ಕರುಣೆಯಂತೆ
ಕಣ್ಮುಚ್ಚಿ ಸವೆಸುವೆನು ನಿನ್ನ ನೆನೆಯುತಾ ಗುರುವೇ|

ಸಂಸಾರ ಸಾಗರದಲಿ ಹುಟ್ಟು ಹಾಕುತ ನಾವೆ ನಡೆಸು
ಬವ ಬಂಧನಗಳ ಸುಳಿಗೆ ಎನ್ನ ದೂಡದೆ ಗುರುವೇ
ಸರಿ ತಪ್ಪುಗಳ ಅಲೆಯ ಸೆಳತದಿಂದ ದೂರವಿಡೆನ್ನ
ಭ್ರಮೆಯ ಸುಳಿಯೊಳು ಸಿಲುಕದಂತೆ ಕಾಪಾಡೆನ್ನ|

ಆಸೆ ಆಮಿಷಗಳೆಂಬ ಕೊಳಕು ತೇಲುತಿಹುದು ಅಲ್ಲಿ
ಮದ ಮತ್ಸರಗಳು ಮುಳುಗಿ ಏಳುತಿಹುದು ಇಲ್ಲಿ
ತನ್ನ ತನವ ಮರೆತು ಮೈ ಮರೆತಿದೆ ಈ ನನ್ನ ತನುವು
ಜಾಲಾಡಿಸಿ ಹೊಳಪು ನೀಡಿ ಕರುಣೀಸೋ ಗುರುವೇ|
ಗುರುನಾಥ ಗಾನಾಮೃತ 
ಬದುಕು ಕಟ್ಟಲು ನಿನ್ನ ಹಾರೈಕೆ ಬೇಕೆನಗೆ  ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಬದುಕು ಕಟ್ಟಲು ನಿನ್ನ ಹಾರೈಕೆ ಬೇಕೆನಗೆ  ಗುರುವೇ
ನಿನ್ನ ನಾಮ ಬಲವೇ ಎನ್ನ ಕಾಯ್ವದು ಬಲ್ಲೆ ಗುರುವೇ|

ಬರೀ ಮಾತಿನ ಮನೆಯಲಿ ಕೂತು ಹಲಬುತಿಹೆನು
ಹಗಲು ಕನಸ ಬೆಂಬೆತ್ತೀ ನೀರಾಶನಾಗಿಹೆ ನಾನು
ಬದುಕಿನ ನಿಜ ಅರಿವು ನೀಡಿ ಹರಸೆನ್ನ ಗುರುವೇ
ನಿನ್ನ ಪದತಳದ ದೂಳಿಗೆ ಎನ್ನ ಶಿರವಿಡುವೆ ಗುರುವೇ|

ದೊರಕದೆ  ಹತಾಶನಾದೆ  ನಿನ್ನ  ದರುಶನದ ಬಾಗ್ಯ
ಕರುಣೀಸೋ ಎನಗೆ ನಿಜ ಬಕುತಿಯಾ ಬಾವ
ಪರಮ ದಯಾಳು ನೀನಿಲ್ಲದೆ ನನ್ನ ಇರುವೇ ಇಲ್ಲಾ
ಎನ್ನ ಮನದಲಿ ನೆಲೆಸಿ ಹರಸೆನ್ನ  ಸದ್ಗುರುವೆ|

ಕುಕರ್ಮಗಳ ಸುಳಿಯಲ್ಲಿ ಮುಳುಗಿಹ  ಈ ಜೀವ
ಸ್ವಾರ್ಥ ಅಸೂಯೆಗಳ ಗೂಡಾಗಿದೆ ಈ ನನ್ನ ದೇಹ
ಹರಿಹರನು ನೀನಲ್ಲವೆನು ಎನ್ನ ಮನ್ನೀಸೊ ಗುರುವೇ
ಬವ ಬಂಧನವ ಬಿಡಿಸಿ ಎನ್ನ ಕಾಯೋ ಸದ್ಗುರುವೆ|

ಮೂರು ದಿನದ ಬದುಕಿನಲ್ಲೂ ಏನೆಲ್ಲಾ ನಿನ್ನ ಲೀಲೆ
ಭ್ರಮೆಯೇ ನಿಜವೆಂದು ಓಡುತಿಹುದು ಮನಸು
ನಿಜವನರಿಯಲು ನಿನ್ನ ದಯೆ ಬೇಕು ಗುರುವೇ
ಸರಿ ತಪ್ಪುಗಳ ಗೊಂದಲದ ಬಾಳು ಸಾಕು ಗುರುವೇ|
ಗುರುನಾಥ ಗಾನಾಮೃತ 
ನಗು ಮೊಗದ ಸರದಾರ ಸಖರಾಯಪುರವಾಸನು
ರಚನೆ: ಆನಂದರಾಮ್, ಶೃಂಗೇರಿ  


ನಗು ಮೊಗದ ಸರದಾರ ಸಖರಾಯಪುರವಾಸನು
ಭಕ್ತ ಜನರ ಪರಿಪಾಲಕ ಆನಂದಘನನು ಇವನು|

ಬೇಡುವಮೊದಲು ಪೊರೆವನು ತನ್ನ ಬಕುತರನು
ಹೇ ಗುರುವೇ ಅಂದಾಗ ಓಡೋಡಿ ಬರುವನು|

ನಿತ್ಯ ಶುದ್ದ ಬಾವದೊಳು ನೆನೆದಾಗ ಕಾಯುವನು
ಹರಿಯು ಹರನು ತಾನೆಂದು ಸಾರಿ ಹೇಳಿಹನು|

ವಿಧಿಯಾಟವ ಬಲ್ಲ ಇವನು ವಿಧಿಯೇ ತಾನೆಂದನು
ಬಕುತರ ಬವಣೆಯ ಬಲ್ಲ ಇವನು ಎಲ್ಲರ ಕಾಯ್ವನು|

ನಿಮ್ಮ ಒಳ ಇರುವ ದೇವನ ಕಾಣೋ ಎಂದನು
ಬೇರೆಲ್ಲೋ ಹುಡುಕಿ ನಿರಾಸೆ ಹೊಂದದಿರು ಎಂದನು|

ಇತರರ ಮನ ನೊಯೀಸದಲೇ ಬದುಕು ಎಂದನು
ನೀ ಪಡೆದುದು ನಿನ್ನ ಕರ್ಮದಫಲ ಎಂದನು ಅವನು|
ಗುರುನಾಥ ಗಾನಾಮೃತ 
ಗುರುವೇ ಸೋತು ಹೋದೆನು ನಿನ್ನ ಬೇಡಿ ಬಂದೆನು
ರಚನೆ: ಆನಂದರಾಮ್, ಶೃಂಗೇರಿ  


ಗುರುವೇ ಸೋತು ಹೋದೆನು ನಿನ್ನ ಬೇಡಿ ಬಂದೆನು
ಪಾದಕೆ ಎನ್ನ ಶಿರವಿತ್ತು ಬೇಡಿ ಕೊಂಬೆನು ಗುರುವೇ|

ನಿನ್ನ ಧ್ಯಾನದಲಿ ಮೈ ಮರೆತು ನಾ ಬೇಡಿ ಕೊಂಬೆನು
ಎನ್ನ ಸ್ವಾರ್ಥ ಮನಕೆ ಮತಿ ನೀಡಿ ಹರಸು ಎನ್ನನು|

ಬೇಕು ಬೇಡಗಳೇ ಬದುಕೇ ಗುರುವೇ ಅರಿಯಲಾರೆ
ಇನ್ನು ಸಾಕು ಬರೀ ಭ್ರಮೆಯ ಅರಸಿ ನಾ ಓಡಲಾರೆ|

ಮುಸುಕು ಧರಿಸಿ ನಡೆವ  ಬದುಕು ಬೇಡ ಗುರುವೇ
ನಿಜ ಬಾವದಿ ಬದುಕು ಕಲಿಸಿ ಎನ್ನ ಹರಸು ಗುರುವೇ|

ಹೇಳುವ ನುಡಿಯೇ ಬೇರೆ ಮಾಡುವ ಕರ್ಮ ಬೇರೆ
ಇದನರಿವ ಮಹಾ ಮಹಿಮ ಗುರು ಎನ್ನ ಮನ್ನಿಪನೇ|

ಏನಗಾವ ಭಯವಿಲ್ಲ ನಿನ್ನ ನಂಬಿಹೆನು ಗುರುವೇ
ಸದಾ ನಿನ್ನ  ಧ್ಯಾನದಿ ಮನ ಇರಿಸಿ ಕಾಯೋ ಗುರುವೇ|
ಗುರುನಾಥ ಗಾನಾಮೃತ 
ನಿನ್ನ ಭಜಿಸದ ದಿನವಿಲ್ಲ ನಿನ್ನ ನೆನೆಯದ ಕ್ಷಣವಿಲ್ಲ
ರಚನೆ: ಆನಂದರಾಮ್, ಶೃಂಗೇರಿ  


ನಿನ್ನ ಭಜಿಸದ ದಿನವಿಲ್ಲ ನಿನ್ನ ನೆನೆಯದ ಕ್ಷಣವಿಲ್ಲ
ನಿನ್ನ ಒಲುಮೆಯು ಬೇಕೆನಗೆ ಓ ಗುರುನಾಥ|

ಬದುಕು  ಎಂಬ  ಹೋರಾಟದಿ ನೀ ಇಲ್ಲದ ದಿನವಿಲ್ಲ
ಕಲಿತ ಪಾಠದಲಿ ಕಂಡೆ ನಾ ನಿನ್ನ ನಾಮದ ಬಲವೆಲ್ಲ|

ನಾನು ಎಂಬುದ ಮರೆತು ನಿನ್ನ ಮೊರೆ ಹೋದೆನಲ್ಲ
ಎನ್ನ ಭ್ರಮೆ ದೂರ ಮಾಡಿ ದಾರಿ ತೋರುವೆಯಲ್ಲ|

ನಾಟಕದ ಬಕುತಿಯಳು ಮೈ ಮರೆತು ಹೋದನಲ್ಲ
ನಿಜ ಬಕುತರ ಸಂಗದಿ ಬೆರೆತು ನನ್ನ ಮರೆತನಲ್ಲಾ|

ಎಸ್ಟು ಬೇಡಿದರು ಮನಕೆ ನೆಮ್ಮದಯದು ಸಿಗಲಿಲ್ಲ
ಅರಿವನಾಲಯಕೆ ದಾರಿಯದು ಸಿಗಲಿಲ್ಲವಲ್ಲ|

ಬರಿ ಮಾತುಗಳ  ಮಾಲೆಯೊಳು ಬಜಿಸಿದೆನಲ್ಲ
ಆಸೆಗಳ ಹೊರೆ ಹೊತ್ತು ನಿನ್ನ ಬೇಡಿ ಬಂದೆನಲ್ಲ|

ಮೌನದಿ ನಿನ್ನ ನೆನೆಯುತ  ಕಾಲ ಕಳೆಯಲಿಲ್ಲ
ಇನ್ನಾದರೂ ಎನ್ನ ಹರಸಿ ಸರಿ ದಾರಿಯಾಕೆ ತೋರಲಿಲ್ಲ|

ಗುರುನಾಥ ಗಾನಾಮೃತ 
ಕೈ ಬಿಡಬೇಡವೋ ಗುರುವೇ ಎನ್ನ ಪೊರೆಯೋ
ರಚನೆ: ಆನಂದರಾಮ್, ಶೃಂಗೇರಿ  


ಕೈ ಬಿಡಬೇಡವೋ ಗುರುವೇ ಎನ್ನ ಪೊರೆಯೋ
ಬಿಡದೇ ಬೇಡಲು ಬಂದು ಕಾಯೋ ನನ್ನ ಗುರುವೇ|

ಮನದ ಶಂಕೆಯ ಪರಿಹರಿಸಿ ಎನ್ನ ಉದ್ದರಿಸೊ
ಸರಿ ತಪ್ಪ ತಿಳಿಸಿ ಈ ಮೂರ್ಖ ನಾ  ಕ್ಷಮಿಸೋ|

ಅರಿವಿದ್ದು ಮಾಡಿಧಾ ಪಾಪಕೆ ಕ್ಷಮೆ ಇರಲಿ ಗುರುವೇ
ನಿನ್ನ ಭಯದಲ್ಲೇ ಬದುಕು ನಡೆಸಲು ಮತಿ ನೀಡು ಗುರುವೇ|

ನಿನ್ನ ಅರಿವು  ಎನಗಾಗಲು ಇನ್ನು ಎಷ್ಟು ಜನುಮ ಬೇಕೋ
ಯಾವ ಪರಿಯ ಕರಮವೊ ಎನದು ಪರಿಹರಿಸಲು|

ಮನಸು ಮರ್ಕಟವು  ಬಯಸುವುದು ಭ್ರಮೆಯಲಿ
ಅಹಂ ಅಳಿಯದೆ ಅವನ ಅರಿವಾಗುವುದು ನನಗೆಲ್ಲೀ|

ನಾನು ಯಾರೆಂದು ಅರಿಯಲು ನಿನ್ನ ಕೃಪೆ ಬೇಕು
ಎನ್ನ ಹೃದಯದಲಿ ನಿಜ ಬಕುತಿಯ ಸೆಲೆಇರಬೇಕು|

ಇದು ಮುಗಿಯದ ಪಯಣವು ನಿನ್ನ ಸೇರಲು ಗುರುವೇ
ಎನ್ನ ಕೈ ಬಿಡದೇ ಅಡಿಗಡಿಗೂ ಸಲಹೆನ್ನ ಗುರುವೇ|
ಗುರುನಾಥ ಗಾನಾಮೃತ 
ಗುರುವೇ ನಿನ್ನ ಭಜಿಸಲು ದೊರೆವುದು ಆನಂದ
ರಚನೆ: ಆನಂದರಾಮ್, ಶೃಂಗೇರಿ  


ಗುರುವೇ ನಿನ್ನ ಭಜಿಸಲು ದೊರೆವುದು ಆನಂದ
ಚರಣ ದರುಶನದಿ ದೊರೆವುದು ಮಹದಾನಂದ|

ನಿನ್ನ ನೆನೆಯುತ ಬರುವೆ ನಾನು ಬೃಂದಾವನಕೇ
ಹರಿಸಿ ಪೊರೆಯೋ ಎನ್ನ ಬಿಡದೇ ಗುರುನಾಥ
ಎನ್ನ ಬಯಕೆಯದು ನಿತ್ಯ ನಿನ್ನ ಸೇವಿಸುವುದು
ಸಿಗಲು ಎನ್ನ ತನು ಮನಕೆ  ನಿನ್ನಿಂದ ಶಾಂತಿಯದು|

ಬರೀ ಮಾತುಗಳ ಸಾಲಲ್ಲಾ ಗುರುವೇ ಇದು
ಎನ್ನ ಮನದಾಳದ ನೋವಿನ ಕೂಗು ಇದು
ಬಕುತಿಯ ನಾಟಕ ಎನಗೆ ಗೊತ್ತಿಲ್ಲ ಗುರುವೇ
ನಿನ್ನ ಬೇಡುವ ಕಾಯಕ ಒಂದೇ ಸದಾ  ನಿಜವು|

ಇತರರ ಕಂಡು ಮಾಡಿದಾ ಭಕುತಿಯಲ್ಲ ಇದು
ನಿನ್ನ ನೆನೆದಾಗ ಸ್ಪುರಿಸುವ ಬಾವನೆಯೋ ಇದು
ಹಸಿವೆ ನೀರಡಿಕೆಯಾ ಹಂಗಿಲ್ಲ ಇನ್ನು ಎನಗೆ
ನಿನ್ನ ನಾಮ ಪಟನೆ  ಸದಾ ನನ್ನ ಕಾಯುವುದು |
ಗುರುನಾಥ ಗಾನಾಮೃತ 
ಗುರು ಚರಣ ನೆನೆದು ಪಾರಣೇ ಮಾಡಿರೋ
ರಚನೆ: ಆನಂದರಾಮ್, ಶೃಂಗೇರಿ  


ಗುರು ಚರಣ ನೆನೆದು ಪಾರಣೇ ಮಾಡಿರೋ
ಹೃದಯದಲಿ  ಗುರು ಬಂದು ನೆಲೆಸುವರೋ|

ಪಾಪದ ಹೊರೆ ಹೊತ್ತು ನಿಂತರೂ ಸಲಹುವರು
ಮುಂದಾದರೂ ಮತಿ ಹೊಂದಿ ನಡೆ ಎನ್ನುವರು
ಅನ್ಯರ ಸರಿ ತಪ್ಪು ನೀ ನೋಡದೆ ಬದುಕೆಂದರು
ನಿನ್ನನರಿತು ಸರಿ ದಾರಿಯಲಿ ನಡೆಯಂದರು|

ಮೌನದಲಿ ಮನಸು ಆಲಿಸಿ ಎನ್ನ ನೆನೆ ಎಂದರು
ಬೇಡುತಲೇ ಮನಸು ನನ್ನ ಪಾದಕೆ ಅರ್ಪಿಸೆಂದರು 
ಮನದ ಕಲ್ಮಶವ ಕಳೆದು ಮಡಿ ಮಾಡೆಂದರು
ದುಗುಡ ದುಮ್ಮಾನವ ನಾ ಕಳೆವೆ ಎಂದರು|

ಪೂರ್ವ ಕರ್ಮವ ಕಳೆಯಲು ಎನ್ನ ಬಜಿಸೆಂದರು
ವಿಧಿ ನಾನು ಜಾಗುರೂಕನಾಗಿ  ನಡೆ ಎಂದರು
ಭಯ ಬೇಕು ಮನಸಿಗೆ ಸರಿ ತಪ್ಪ ಅರಿಯಲು
ಕಾಲ ಕಳೆಯದೆ ನನ್ನ ಸೇವಿಸಿ ಬದುಕೆಂದರು|

ಗುರುನಾಥ ಗಾನಾಮೃತ 
ನಡೆದಾಡುವ ದೇವನಿವನು ನಮ್ಮ ಗುರುವರನು
ರಚನೆ: ಆನಂದರಾಮ್, ಶೃಂಗೇರಿ  


ನಡೆದಾಡುವ ದೇವನಿವನು ನಮ್ಮ ಗುರುವರನು
ಬೇಡಿಬರಲು ಸಲಹುವನು ನಮ್ಮ ಗುರುನಾಥನು|

ಇಲ್ಲೆ ಇರುವೆ ನಾನು ಕಾಣ ಸಿಗೆನು ಬರಿ ಕಣ್ಣಿಗೆ
ನಿಮ್ಮೊಲಗಿಹ ಕಣ್ಣು ತೆರೆದು ನೋಡೆಂದನು
ಬರಿ ಮಾತನಾಡದೆ  ಮೌನದಿ ನನ್ನ ಬಜಿಸೆಂದನು
ಮನದಿ ಮೂಡುವ ಭಾವನೆಗಳ ಅರಿಯೆಂದನು|

ನಾನು ನನ್ನದು ಎಂದೆನುತ  ದಿನ ಕಳೆಯುತಲಿರಲು
ನಾ ಬಾರದೆ ಹೋಗುವೆ ನಿನ್ನೆಡೆಗೆ  ಎಂದನವನು
ಹುಸಿ ಮನಿಸ ತೋರುತ ಎನ್ನ ತಪ್ಪ ತಿದ್ದುತಿಹನು
ಇನ್ನಾರು ಇವನು ಅವನೇ ನನ್ನ ಗುರುನಾಥನು|

ಹೃದಯ ಜೋಳಿಗೆಯಲಿ ಬರಿ ಭಕುತಿ ಇರಲು
ಮನದಿ ತುಂಬ ಸದಾ ಅವನ ನಾಮ ತುಂಬಿರಲು
ಕೈ ಬಿಡಲಾರನು ಆ ಮಹಾ ಅವಧೂತ ಮಹಿಮನು
ಇನ್ನೇಕೆ ಚಿಂತೆ ಎನಗೆ ಅವನ ಸದಾ ಬಜೀಸುತಲಿರಲು|
ಗುರುನಾಥ ಗಾನಾಮೃತ 
ವಿಶ್ವ ವ್ಯಾಪಕನು  ನೀನು ವಿಶ್ವ ವಂದ್ಯನು ನೀನು
ರಚನೆ: ಆನಂದರಾಮ್, ಶೃಂಗೇರಿ  


ವಿಶ್ವ ವ್ಯಾಪಕನು  ನೀನು ವಿಶ್ವ ವಂದ್ಯನು ನೀನು
ಏನು ಬೇಡ ಬಲ್ಲೆನು ನಾನು ಮಂದ ಮತಿ ಇವನು|

ಬರೀ ಭ್ರಮೆಯ ಜಗದೊಳು ಬಡಿದಾಡುತಿಹೆನು
ಅಣು ಅಣುವಿನಲೂ ಸದಾ ನಿನ್ನ ಕಾಣುತಿಹೆನು
ಪ್ರತಿ ಕ್ಷಣದಲೂ ನಿನ್ನ ಅರಿವ ನೀಡೋ ಗುರುವೇ
ಇನ್ನೇನು ಬೇಡೆನು ನಾನು ಸದಾ ಸಲಹು ಏನನ್ನು|

ಪದಗಳಾ ಮಾಲೆಯಲಿ ಭಕುತಿ ಹುಡುಕುತಿಹೆನು
ನಿರಾಸೆಯ ಬಲೆಯ ಸುಳಿಯಲಿ ಬಾವನೆಗಳು
ಹತ್ತಿಕ್ಕಿ ಚಂಚಲ ಮನವನು ನಿನ್ನ ಬೇಡುತಿಹೆನು
ಎನ್ನ ಕಾಯ್ದು ಮತಿ ನೀಡಿ ಸಲಹು ನನ್ನನು ನೀನು|

ಮಡಿ ಮಾಡಿ ಉಪವಾಸ  ಕುಳಿತು ಭೇಡೆನು ನಾನು
ಜಪಗೈದು  ಮೌನದಿಂದ ನಿನ್ನ ಬಜಿಸೆನು ನಾನು
ಎನ್ನ ಮತಿಗೆ ನಿನ್ನ ನೆನೆವ ಮನವ ನೀಡೆಯ ನೀನು
ಇನ್ನು ಯಾತಕೆ ತಡಮಾಡಿ ಯಾತನೆ ನೀಡುವೆ ನೀನು| 
ಗುರುನಾಥ ಗಾನಾಮೃತ 
ಉದ್ದರಿಸೊ ಗುರುವೇ ಎನ್ನ ಪರಿಪರಿಯಲಿ ಬೇಡುವೆ 
ರಚನೆ: ಆನಂದರಾಮ್, ಶೃಂಗೇರಿ  


ಉದ್ದರಿಸೊ ಗುರುವೇ ಎನ್ನ ಪರಿಪರಿಯಲಿ ಬೇಡುವೆ 
ಹರಸಿ ಎನ್ನ  ದಯೆ ತೋರಿ  ದಾರಿ ತೊರೋ ಗುರುವೇ

ಮನದಾಳದ ದುಗುಡವದು  ಕಾಡುತಿದೆ  ಗುರುವೇ
ಸರಿ ತಪ್ಪಿನ ಅರಿವು ತಿಳಿಯದೇ ನೊಂದಿದೆ ಮನವು
ಬರಿ ಭ್ರಮೆಯ ಬದುಕು ಸಾಕಾಗಿದೆ ನನ್ನ ಗುರುವೇ
ನಿನ್ ಅರಿವು ಮೂಡಿಸಿ ನನ್ನ ಸಲಹೂ ಗುರುವೇ |

ದೋಣಿಯಲಿ ಕುಳಿತು ದಡ ಸೇರುವ  ಕಾತುರವದು
ನಿನ್ನ   ನಾಮದ ಬಲವೆಂಬ ಹುಟ್ಟು ಹಾಕುತ ನಾನು
ಮುಂದೆ  ಅರಿಯದೆ ನಿನ್ನ ನಂಬಿ ನಡದೆ  ನಾನು
ಸುಳಿಯಲಿ ಸಿಲುಕದೆ ಬಾಳ ದಡ ಸೇರಿಸು ಎನ್ನನು|

ಅಪರಾದವ  ಮಾಡುತ ಮೈ ಮರೆತು ಕುಳಿತಿಹೆನೂ
ನಿನ್ನ ನೆನೆದರೆ  ಸಾಕು ಎಂಬ ಹಂಬಿನಲಿ  ಗುರುವೇ
ಎನ್ನ ಎಚ್ಚರಿಸಿ ಕನಿಕರಿಸಿ ದಾರಿ ತೊರೋ ಗುರುವೇ
ಪಶ್ಚತಾಪವದು ಉದ್ಡರಿಸಲು ಸಾಕಾಗದೆ ಗುರುವೇ|

ಗುರುನಾಥ ಗಾನಾಮೃತ 
ಏನು ಬೇಡಲಿ ನಿಮ್ಮನು ನನ್ನ. ಸದ್ಗುರುವೇ ಎಲ್ಲವೂ ನಿಮ್ಮಿಂದ ಈ ಬದುಕೂ ನಿಮ್ಮಿಂದ
ರಚನೆ: ಆನಂದರಾಮ್, ಶೃಂಗೇರಿ  


ಏನು ಬೇಡಲಿ ನಿಮ್ಮನು ನನ್ನ. ಸದ್ಗುರುವೇ ಎಲ್ಲವೂ ನಿಮ್ಮಿಂದ ಈ ಬದುಕೂ ನಿಮ್ಮಿಂದ|

ಮನದ ತುಂಬಾ ಬರೀ ಅಸುರೀ ಬಾವನೆಗಳು
ಒಡಲಾಳದಿ ತುಂಬಿದೆ ಕಲುಷಿತ ಚಿಂತನೆಗಳು|
                                                             
ಬರಿದಾದ ಬಾಳಿದು ಬದುಕಲು ಬೆದರಿಹಿನೂ
ಬಂದು ಸಲಹುವನು ಗುರುವೆಂದು ನಂಬಿಹನು

ತೋರಿಕೆಯೇ ಬಕುತಿಯೆಂದು ನಂಬಿತ್ತು ಮನವು      
ಸರಿದಾರಿ ತೋರಿತು ಗುರುವಿನಾ. ಅರಿವು|
ನಿನ್ನ ನಂಬಿಹೆ. ಗುರುವೇ ಉದ್ಧರಿಸು ನನ್ನನು
ನಿನ್ನ ಸಹವಾಸ ದೊರೆತರೆ  ಸಾಕೆನಗೆ ಇನ್ನು|

ನಿನ್ನ ಅರಿತ ಸಾಧಕರ ಸಹವಾಸ ಬಲು ಚೆನ್ನ
ನಿನ್ನ ಪ್ರೀತಿಯ ನುಡಿಗಳು ಒಡಲಿಗೆ ಚೆನ್ನ|

ಹಾತೊರೆಯುತ್ತಿದೆ ಮನವು ನಿನ್ನ ಕರುಣೆಗೆ
ತುಡಿಯುತಿದೆ ಹೃದಯ ಸದಾ ನಿನ್ನ ಕೃಪೆಗೆ.|
ಗುರುನಾಥ ಗಾನಾಮೃತ 
ಸಲಹುವನು ಗುರುವು ಹರಸುವನು ಗುರುವು. ಮರೆತರು ಕೈ ಹಿಡಿದು ನಡೆಸುವನು ಗುರುವು 
ರಚನೆ: ಆನಂದರಾಮ್, ಶೃಂಗೇರಿ  


ಸಲಹುವನು ಗುರುವು ಹರಸುವನು ಗುರುವು. ಮರೆತರು ಕೈ ಹಿಡಿದು ನಡೆಸುವನು ಗುರುವು |

ಬೇಡುವೆ ದೀನನಾಗಿ ನಿಮ್ಮ ಚಾರಣ ನೆನೆದು  
ಕರುಣಿಸೋ ಈ ಮತಿ ಹೀನನ  ಎಂದೆಂದೂ|

ನಾನು ನನ್ನದೆಂಬ ಭ್ರಮೆಯ ಅಳಿಸುವನೀತ
ಕಿರಿಯ ನಾನೆಂಬ ಬಾವ ನನ್ನಲಿ ತಂದವನೀತ|

ಗುರುವಿನರಿವ ತಿಳಿಸಿ ಗುರಿ ತೋರಿದನೀತ
ಎಲ್ಲಾ ಗುರುವಿನಿಂದ ಎಂದು ತಿಳಿಸಿದನೀತ|
ಬಡವ ಬಲ್ಲಿದನೆಂಬ ಭೇದವನರಿಯನೀತ
ಬೇಡಿ ಬಂದವರ ಕರುಣದಿ ಸಲಹುವನೀತ|   

ಗುರು ದೇಹವಲ್ಲ ಅದು ಭಾವನೆ ಅಂದನೀತ ಗುರು ನಂಬಿರೆ ಸಂಸಾರಸಾಗರ ದಾಟಿಸುವನೀತ
ಗುರುನಾಥ ಗಾನಾಮೃತ 
ಬೇಡುವೆನು ಗುರುವನ್ನು ಹರಸು ನೀ ಎನ್ನನು
ರಚನೆ: ಆನಂದರಾಮ್, ಶೃಂಗೇರಿ  


ಬೇಡುವೆನು ಗುರುವನ್ನು ಹರಸು ನೀ ಎನ್ನನು
ಅನುದಿನವು ಪ್ರತಿಕ್ಷಣವೂ ಬೇಡುವೆ ನಿನ್ನನು

ಮನದ ನೋವು ಬಿಡದೆ ಕಾಡುತಿದೆ ಎನ್ನನು
ನಿನ್ನ ನೆನೆಯದೆ ಬೇರೆ ದಾರಿ ತೋರದು ಇನ್ನು

ಯಾವ ರಾಗದಿ ಪಾಡಲು ನೀ ಕರುಣಿಸುವೆ
ಮೂಕನಾಗಿ ನಿಂತಿರುವೆ  ಕಾಣದೆ ಗುರುವೇ

ನಿನ್ನ ಕರುಣೆಗೆ ಹಂಬಲಿಸಿ ಕೂಗಿಹೆನು ನಾನು
ಇನ್ನೂ ದಯೆಬಾರದೆ ಹರಸಲು ನೀ ಎನ್ನನು
ಸಾದಾ ಬಕುತನು ನಾನು ಆಡಂಬರ ಗೊತ್ತಿಲ್ಲ
ಮಡಿಯುಟ್ಟು ಭಜಿಸುವುದು ನಾನು ತಿಳಿದಿಲ್ಲ

ತೊದಲುತಲೆ ನುಡಿವೆನು ನಿನ್ನ ನಾಮವನ್ನು
ಪದ್ಯ ಗದ್ಯ ರಚಿಸಿ ಪಾಡುವ ಪಂಡಿತ ನಾನಲ್ಲ

 ನೀ ಹರಸಿದರೆ ಸಾಕೆನಗೆ  ಬೇರೇನು ಬೇಕಿಲ್ಲ
ಕೈ ಬಿಡದೆ ಎನ್ನನು ಪೊರೆದರೆ ಸಾಕು ಗುರುವೇ
ಗುರುನಾಥ ಗಾನಾಮೃತ 
ಇನ್ನು ಕಾಯೇನು ಗುರುವೇ ಇನ್ನು ಕಾಯೇನು ಎನ್ನ ಪರೀಕ್ಷಸದೆ ಉದ್ಧರಿಸೋ ನನ್ನ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಇನ್ನು ಕಾಯೇನು ಗುರುವೇ ಇನ್ನು ಕಾಯೇನು ಎನ್ನ ಪರೀಕ್ಷಸದೆ ಉದ್ಧರಿಸೋ ನನ್ನ ಗುರುವೇ

ಎಲ್ಲರಲೂ ನೀ ಇರುವ ಪರಿ ತಿಳಿದಿಹೆ ನಾನು
ನನ್ನೇಕೆ ದೂರವಿರಿಸಿ ಕಾಡುವೆ  ಈ ಪರಿ ನೀನು

ಅಂತರಂಗ ಶುದ್ದಿಯಿಲ್ಲವೇ ನನ್ನದು ಗುರುವೇ
ನಿನ್ನಲಿ ಭಕ್ತಿ ನೀಡಿ ಎನ್ನನೇಕೆ ಕಾಡುವೆ ಗುರುವೆ
                                      
ನಿನ್ನರಿವ ಹಂಬಲ ನನಗೇಕೆ ನೀಡಿದೆ ಗುರುವೇ
ಬರಿ ಬ್ರಮೆಯಲಿ ನಾ ಕಾಲ ಕಳೆಯುತ್ತಿದ್ದೆ ಗುರುವೇ
ಹಾಲಿಗೆ ಹಂಬಲಿಸುವ ಹಸು ಗೂಸಿನಂತೆ ನಾ
ನಿನ್ನ ಕರುಣೆಯಾ ನುಡಿಗೆ ಕಾಯುತಿಹೆ ನಾನು

ಕೂಗಿ ಕರೆದಾಗ ದರುಶನ ನೀಡುವೇ ನೀನು
ನಾ ಕರೆದಾಗ ಗುರುವೇ  ಕೂಗು ಕೇಳದೇನು    

ಎಷ್ಟು ಪರಿ ಬೇಡಿದರು ದಯ ಬಾರದೆ  ಗುರುವೇ
ದೂರಮಾಡದೆ ಎನ್ನ ಹರಸು ನನ್ನ ಗುರುವೇ
ಗುರುನಾಥ ಗಾನಾಮೃತ 
ಓಂ ನಮೋ ಗುರುನಾಥ ಓಂ ನಮೋ ಅವಧೂತ
ರಚನೆ: ಆನಂದರಾಮ್, ಶೃಂಗೇರಿ  


ಓಂ ನಮೋ ಗುರುನಾಥ ಓಂ ನಮೋ ಅವಧೂತ
ಭಕ್ತರ ಸಲಹುತ ಸಕರಾಯಪುರದಿ ನೆಲೆನಿಂತ
                                                         
ಸಗುಣ ರೂಪದಿ ಹರಸುತ ಭಕ್ತರ ಪೊರೆದನು
ದೇಹಿಯೆಂದವರ. ಬಲುಕರುಣಧಿ ಸಲಹಿದನು
                                                        
ನಾನು ನನ್ನಿಂದ ಎಂಬುದ ಅವ ತಿಳಿದೇ  ಇಲ್ಲ
ಎಲ್ಲ ನಿಮ್ಮದೆಂದು ಸಕಲರಿಗೂ ಹಂಚಿದನಲ್ಲ
                                                     
ಹೇಳುವ ಮಾತಿನ ತತ್ವ ನಾ ಅರಿಯಲೇ ಇಲ್ಲ
ಎಷ್ಟು ಕಲಿತರೂ ಅರಿವಿಗೆ ಕೊನೆಯೇ   ಇಲ್ಲ
ಆಧ್ಯಾತ್ಮದ ತಿರುಳು ತುಸು ಸವಿಯಿರಿ   ಎಂದ
                                       ಹುಲುಮಾನವ  ಬರೀ ಹುಸಿ ಭ್ರಮೆಯೇ ಸಾಕೆಂದ                                   
                                       
ಮೂಕ ಜೀವಿಯೊಳು ಆ ಭಗವಂತನ  ಕಂಡ
ತಾನೇ ದೇವನಾದರೂ  ನಮ್ಮಲ್ಲೂ ಅವಕಂಡ
                                                     
ದೇವನಿಲ್ಲದೆ ಈ  ಜಗವೇ ಇಲ್ಲವೆಂದ ಗುರುವು
ಮೂಡಲಿಲ್ಲ ಹುಲು ಮನುಜಗೆ ಅದರ ಅರಿವು

ತಾನೇ ದೇವನಾದರೂ ತೋರಲಿಲ್ಲ ಹೊರಗೆ
ನಿಜ ಬಕುತ ಮನುಜಗೆ ತಿಳಿದಿತ್ತು ಒಳಗೆ
ಗುರುನಾಥ ಗಾನಾಮೃತ 
ಅಮ್ಮ ಎಂದು ಕೂಗಲು ಹಾಲುಣಿಸಿ ಸಲಹುವಳು ತಾಯಿ
ರಚನೆ: ಆನಂದರಾಮ್, ಶೃಂಗೇರಿ  


ಅಮ್ಮ ಎಂದು ಕೂಗಲು ಹಾಲುಣಿಸಿ ಸಲಹುವಳು ತಾಯಿ
                                        ಗುರುವೇ ಎನ್ನಲು ಕೃಪೆದೋರಿ  ಹರಸುವನು ಗುರುವು                                         
                                                   
ನಿನ್ನ ಧ್ಯಾನದಲಿ ಸದಾ ನಿರತನು ನಾನು
ಗುರುವೇ ಕೂಗಿದರೂ ದಯೆ ಬಾರದೇನು 
                                                        
ಎಲ್ಲವನು ಅರಿತವನು ಗುರು ನೀನಲ್ಲವೇನು
ನನ್ನ ಮನದ ಬಕುತಿಯ ಕೂಗು  ಕೇಳದೇನು
                                                    
ಅರಿವಿಲ್ಲದೆ ಮಾಡಿದ ಕರ್ಮವ ಮನ್ನಿಸೆಯಾ
ಪಶ್ಚಾತಾಪ ಪಡಲು ಎನ್ನ ನೀ ಹರಸೆಯಾ
ಎಲ್ಲರನು ಹರಸುವ ನೀನು ಬೇಡವಾದನೆ ನಾನು 
ಏನು ಮಾಡಲಿ ಇನ್ನು ನೀ ನನ್ನ ಕರುಣಿಸಲು

ಮನದ ಚಂಚಲತೆಯ ಹಿಡಿದಿಡಲಾರೆ ನಾನು
ಕರುಣೆ ತೋರಿ  ಎನ್ನ ಉದ್ಧರಿಸಬಾರದೆ ನೀನು

ಬಕುತರೊಡಗೂಡಿ ಬದುಕುವ ಆಸೆ ನನಗೆ
ನಿನ್ನ ನಿಜ ಬಕುತರ ಸಂಗ ನೀಡೆಯಾ ಎನಗೆ 

ಕಗ್ಗತ್ತಲಾ ಬದುಕು ಸಾಕೆನಿಸಿದೆ ಗುರುವೇ
 ಬೆಳಕ ನೀಡಿ  ಹರಸು ನೀ ನನ್ನ ಗುರುವೇ