ಗುರುನಾಥ ಗಾನಾಮೃತ
ವಿಶ್ವ ವ್ಯಾಪಕನು ನೀನು ವಿಶ್ವ ವಂದ್ಯನು ನೀನು
ರಚನೆ: ಆನಂದರಾಮ್, ಶೃಂಗೇರಿ
ವಿಶ್ವ ವ್ಯಾಪಕನು ನೀನು ವಿಶ್ವ ವಂದ್ಯನು ನೀನು
ಏನು ಬೇಡ ಬಲ್ಲೆನು ನಾನು ಮಂದ ಮತಿ ಇವನು|
ಬರೀ ಭ್ರಮೆಯ ಜಗದೊಳು ಬಡಿದಾಡುತಿಹೆನು
ಅಣು ಅಣುವಿನಲೂ ಸದಾ ನಿನ್ನ ಕಾಣುತಿಹೆನು
ಪ್ರತಿ ಕ್ಷಣದಲೂ ನಿನ್ನ ಅರಿವ ನೀಡೋ ಗುರುವೇ
ಇನ್ನೇನು ಬೇಡೆನು ನಾನು ಸದಾ ಸಲಹು ಏನನ್ನು|
ಪದಗಳಾ ಮಾಲೆಯಲಿ ಭಕುತಿ ಹುಡುಕುತಿಹೆನು
ನಿರಾಸೆಯ ಬಲೆಯ ಸುಳಿಯಲಿ ಬಾವನೆಗಳು
ಹತ್ತಿಕ್ಕಿ ಚಂಚಲ ಮನವನು ನಿನ್ನ ಬೇಡುತಿಹೆನು
ಎನ್ನ ಕಾಯ್ದು ಮತಿ ನೀಡಿ ಸಲಹು ನನ್ನನು ನೀನು|
ಮಡಿ ಮಾಡಿ ಉಪವಾಸ ಕುಳಿತು ಭೇಡೆನು ನಾನು
ಜಪಗೈದು ಮೌನದಿಂದ ನಿನ್ನ ಬಜಿಸೆನು ನಾನು
ಎನ್ನ ಮತಿಗೆ ನಿನ್ನ ನೆನೆವ ಮನವ ನೀಡೆಯ ನೀನು
ಇನ್ನು ಯಾತಕೆ ತಡಮಾಡಿ ಯಾತನೆ ನೀಡುವೆ ನೀನು|
No comments:
Post a Comment