ಗುರುನಾಥ ಗಾನಾಮೃತ
ಗುರುವೇ ನಿನ್ನ ಭಜಿಸಲು ದೊರೆವುದು ಆನಂದ
ರಚನೆ: ಆನಂದರಾಮ್, ಶೃಂಗೇರಿ
ಗುರುವೇ ನಿನ್ನ ಭಜಿಸಲು ದೊರೆವುದು ಆನಂದ
ಚರಣ ದರುಶನದಿ ದೊರೆವುದು ಮಹದಾನಂದ|
ನಿನ್ನ ನೆನೆಯುತ ಬರುವೆ ನಾನು ಬೃಂದಾವನಕೇ
ಹರಿಸಿ ಪೊರೆಯೋ ಎನ್ನ ಬಿಡದೇ ಗುರುನಾಥ
ಎನ್ನ ಬಯಕೆಯದು ನಿತ್ಯ ನಿನ್ನ ಸೇವಿಸುವುದು
ಸಿಗಲು ಎನ್ನ ತನು ಮನಕೆ ನಿನ್ನಿಂದ ಶಾಂತಿಯದು|
ಬರೀ ಮಾತುಗಳ ಸಾಲಲ್ಲಾ ಗುರುವೇ ಇದು
ಎನ್ನ ಮನದಾಳದ ನೋವಿನ ಕೂಗು ಇದು
ಬಕುತಿಯ ನಾಟಕ ಎನಗೆ ಗೊತ್ತಿಲ್ಲ ಗುರುವೇ
ನಿನ್ನ ಬೇಡುವ ಕಾಯಕ ಒಂದೇ ಸದಾ ನಿಜವು|
ಇತರರ ಕಂಡು ಮಾಡಿದಾ ಭಕುತಿಯಲ್ಲ ಇದು
ನಿನ್ನ ನೆನೆದಾಗ ಸ್ಪುರಿಸುವ ಬಾವನೆಯೋ ಇದು
ಹಸಿವೆ ನೀರಡಿಕೆಯಾ ಹಂಗಿಲ್ಲ ಇನ್ನು ಎನಗೆ
ನಿನ್ನ ನಾಮ ಪಟನೆ ಸದಾ ನನ್ನ ಕಾಯುವುದು |
No comments:
Post a Comment