ಗುರುನಾಥ ಗಾನಾಮೃತ
ನಿನ್ನ ಭಜಿಸದ ದಿನವಿಲ್ಲ ನಿನ್ನ ನೆನೆಯದ ಕ್ಷಣವಿಲ್ಲ
ರಚನೆ: ಆನಂದರಾಮ್, ಶೃಂಗೇರಿ
ನಿನ್ನ ಭಜಿಸದ ದಿನವಿಲ್ಲ ನಿನ್ನ ನೆನೆಯದ ಕ್ಷಣವಿಲ್ಲ
ನಿನ್ನ ಒಲುಮೆಯು ಬೇಕೆನಗೆ ಓ ಗುರುನಾಥ|
ಬದುಕು ಎಂಬ ಹೋರಾಟದಿ ನೀ ಇಲ್ಲದ ದಿನವಿಲ್ಲ
ಕಲಿತ ಪಾಠದಲಿ ಕಂಡೆ ನಾ ನಿನ್ನ ನಾಮದ ಬಲವೆಲ್ಲ|
ನಾನು ಎಂಬುದ ಮರೆತು ನಿನ್ನ ಮೊರೆ ಹೋದೆನಲ್ಲ
ಎನ್ನ ಭ್ರಮೆ ದೂರ ಮಾಡಿ ದಾರಿ ತೋರುವೆಯಲ್ಲ|
ನಾಟಕದ ಬಕುತಿಯಳು ಮೈ ಮರೆತು ಹೋದನಲ್ಲ
ನಿಜ ಬಕುತರ ಸಂಗದಿ ಬೆರೆತು ನನ್ನ ಮರೆತನಲ್ಲಾ|
ಎಸ್ಟು ಬೇಡಿದರು ಮನಕೆ ನೆಮ್ಮದಯದು ಸಿಗಲಿಲ್ಲ
ಅರಿವನಾಲಯಕೆ ದಾರಿಯದು ಸಿಗಲಿಲ್ಲವಲ್ಲ|
ಬರಿ ಮಾತುಗಳ ಮಾಲೆಯೊಳು ಬಜಿಸಿದೆನಲ್ಲ
ಆಸೆಗಳ ಹೊರೆ ಹೊತ್ತು ನಿನ್ನ ಬೇಡಿ ಬಂದೆನಲ್ಲ|
ಮೌನದಿ ನಿನ್ನ ನೆನೆಯುತ ಕಾಲ ಕಳೆಯಲಿಲ್ಲ
ಇನ್ನಾದರೂ ಎನ್ನ ಹರಸಿ ಸರಿ ದಾರಿಯಾಕೆ ತೋರಲಿಲ್ಲ|
No comments:
Post a Comment