ಒಟ್ಟು ನೋಟಗಳು

Friday, April 27, 2018

ಗುರುನಾಥ ಗಾನಾಮೃತ 
ಗುರುವೇ ಸೋತು ಹೋದೆನು ನಿನ್ನ ಬೇಡಿ ಬಂದೆನು
ರಚನೆ: ಆನಂದರಾಮ್, ಶೃಂಗೇರಿ  


ಗುರುವೇ ಸೋತು ಹೋದೆನು ನಿನ್ನ ಬೇಡಿ ಬಂದೆನು
ಪಾದಕೆ ಎನ್ನ ಶಿರವಿತ್ತು ಬೇಡಿ ಕೊಂಬೆನು ಗುರುವೇ|

ನಿನ್ನ ಧ್ಯಾನದಲಿ ಮೈ ಮರೆತು ನಾ ಬೇಡಿ ಕೊಂಬೆನು
ಎನ್ನ ಸ್ವಾರ್ಥ ಮನಕೆ ಮತಿ ನೀಡಿ ಹರಸು ಎನ್ನನು|

ಬೇಕು ಬೇಡಗಳೇ ಬದುಕೇ ಗುರುವೇ ಅರಿಯಲಾರೆ
ಇನ್ನು ಸಾಕು ಬರೀ ಭ್ರಮೆಯ ಅರಸಿ ನಾ ಓಡಲಾರೆ|

ಮುಸುಕು ಧರಿಸಿ ನಡೆವ  ಬದುಕು ಬೇಡ ಗುರುವೇ
ನಿಜ ಬಾವದಿ ಬದುಕು ಕಲಿಸಿ ಎನ್ನ ಹರಸು ಗುರುವೇ|

ಹೇಳುವ ನುಡಿಯೇ ಬೇರೆ ಮಾಡುವ ಕರ್ಮ ಬೇರೆ
ಇದನರಿವ ಮಹಾ ಮಹಿಮ ಗುರು ಎನ್ನ ಮನ್ನಿಪನೇ|

ಏನಗಾವ ಭಯವಿಲ್ಲ ನಿನ್ನ ನಂಬಿಹೆನು ಗುರುವೇ
ಸದಾ ನಿನ್ನ  ಧ್ಯಾನದಿ ಮನ ಇರಿಸಿ ಕಾಯೋ ಗುರುವೇ|

No comments:

Post a Comment