ಗುರುನಾಥ ಗಾನಾಮೃತ
ನಡೆದಾಡುವ ದೇವನಿವನು ನಮ್ಮ ಗುರುವರನು
ರಚನೆ: ಆನಂದರಾಮ್, ಶೃಂಗೇರಿ
ನಡೆದಾಡುವ ದೇವನಿವನು ನಮ್ಮ ಗುರುವರನು
ಬೇಡಿಬರಲು ಸಲಹುವನು ನಮ್ಮ ಗುರುನಾಥನು|
ಇಲ್ಲೆ ಇರುವೆ ನಾನು ಕಾಣ ಸಿಗೆನು ಬರಿ ಕಣ್ಣಿಗೆ
ನಿಮ್ಮೊಲಗಿಹ ಕಣ್ಣು ತೆರೆದು ನೋಡೆಂದನು
ಬರಿ ಮಾತನಾಡದೆ ಮೌನದಿ ನನ್ನ ಬಜಿಸೆಂದನು
ಮನದಿ ಮೂಡುವ ಭಾವನೆಗಳ ಅರಿಯೆಂದನು|
ನಾನು ನನ್ನದು ಎಂದೆನುತ ದಿನ ಕಳೆಯುತಲಿರಲು
ನಾ ಬಾರದೆ ಹೋಗುವೆ ನಿನ್ನೆಡೆಗೆ ಎಂದನವನು
ಹುಸಿ ಮನಿಸ ತೋರುತ ಎನ್ನ ತಪ್ಪ ತಿದ್ದುತಿಹನು
ಇನ್ನಾರು ಇವನು ಅವನೇ ನನ್ನ ಗುರುನಾಥನು|
ಹೃದಯ ಜೋಳಿಗೆಯಲಿ ಬರಿ ಭಕುತಿ ಇರಲು
ಮನದಿ ತುಂಬ ಸದಾ ಅವನ ನಾಮ ತುಂಬಿರಲು
ಕೈ ಬಿಡಲಾರನು ಆ ಮಹಾ ಅವಧೂತ ಮಹಿಮನು
ಇನ್ನೇಕೆ ಚಿಂತೆ ಎನಗೆ ಅವನ ಸದಾ ಬಜೀಸುತಲಿರಲು|
No comments:
Post a Comment