ಗುರುನಾಥ ಗಾನಾಮೃತ
ಗುರು ಚರಣ ನೆನೆದು ಪಾರಣೇ ಮಾಡಿರೋ
ರಚನೆ: ಆನಂದರಾಮ್, ಶೃಂಗೇರಿ
ಗುರು ಚರಣ ನೆನೆದು ಪಾರಣೇ ಮಾಡಿರೋ
ಹೃದಯದಲಿ ಗುರು ಬಂದು ನೆಲೆಸುವರೋ|
ಪಾಪದ ಹೊರೆ ಹೊತ್ತು ನಿಂತರೂ ಸಲಹುವರು
ಮುಂದಾದರೂ ಮತಿ ಹೊಂದಿ ನಡೆ ಎನ್ನುವರು
ಅನ್ಯರ ಸರಿ ತಪ್ಪು ನೀ ನೋಡದೆ ಬದುಕೆಂದರು
ನಿನ್ನನರಿತು ಸರಿ ದಾರಿಯಲಿ ನಡೆಯಂದರು|
ಮೌನದಲಿ ಮನಸು ಆಲಿಸಿ ಎನ್ನ ನೆನೆ ಎಂದರು
ಬೇಡುತಲೇ ಮನಸು ನನ್ನ ಪಾದಕೆ ಅರ್ಪಿಸೆಂದರು
ಮನದ ಕಲ್ಮಶವ ಕಳೆದು ಮಡಿ ಮಾಡೆಂದರು
ದುಗುಡ ದುಮ್ಮಾನವ ನಾ ಕಳೆವೆ ಎಂದರು|
ಪೂರ್ವ ಕರ್ಮವ ಕಳೆಯಲು ಎನ್ನ ಬಜಿಸೆಂದರು
ವಿಧಿ ನಾನು ಜಾಗುರೂಕನಾಗಿ ನಡೆ ಎಂದರು
ಭಯ ಬೇಕು ಮನಸಿಗೆ ಸರಿ ತಪ್ಪ ಅರಿಯಲು
ಕಾಲ ಕಳೆಯದೆ ನನ್ನ ಸೇವಿಸಿ ಬದುಕೆಂದರು|
No comments:
Post a Comment