ಗುರುನಾಥ ಗಾನಾಮೃತ
ಓಂ ನಮೋ ಗುರುನಾಥ ಓಂ ನಮೋ ಅವಧೂತ
ರಚನೆ: ಆನಂದರಾಮ್, ಶೃಂಗೇರಿ
ಓಂ ನಮೋ ಗುರುನಾಥ ಓಂ ನಮೋ ಅವಧೂತ
ಭಕ್ತರ ಸಲಹುತ ಸಕರಾಯಪುರದಿ ನೆಲೆನಿಂತ
ಸಗುಣ ರೂಪದಿ ಹರಸುತ ಭಕ್ತರ ಪೊರೆದನು
ದೇಹಿಯೆಂದವರ. ಬಲುಕರುಣಧಿ ಸಲಹಿದನು
ನಾನು ನನ್ನಿಂದ ಎಂಬುದ ಅವ ತಿಳಿದೇ ಇಲ್ಲ
ಎಲ್ಲ ನಿಮ್ಮದೆಂದು ಸಕಲರಿಗೂ ಹಂಚಿದನಲ್ಲ
ಹೇಳುವ ಮಾತಿನ ತತ್ವ ನಾ ಅರಿಯಲೇ ಇಲ್ಲ
ಎಷ್ಟು ಕಲಿತರೂ ಅರಿವಿಗೆ ಕೊನೆಯೇ ಇಲ್ಲ
ಆಧ್ಯಾತ್ಮದ ತಿರುಳು ತುಸು ಸವಿಯಿರಿ ಎಂದ
ಹುಲುಮಾನವ ಬರೀ ಹುಸಿ ಭ್ರಮೆಯೇ ಸಾಕೆಂದ
ಮೂಕ ಜೀವಿಯೊಳು ಆ ಭಗವಂತನ ಕಂಡ
ತಾನೇ ದೇವನಾದರೂ ನಮ್ಮಲ್ಲೂ ಅವಕಂಡ
ದೇವನಿಲ್ಲದೆ ಈ ಜಗವೇ ಇಲ್ಲವೆಂದ ಗುರುವು
ಮೂಡಲಿಲ್ಲ ಹುಲು ಮನುಜಗೆ ಅದರ ಅರಿವು
ತಾನೇ ದೇವನಾದರೂ ತೋರಲಿಲ್ಲ ಹೊರಗೆ
ನಿಜ ಬಕುತ ಮನುಜಗೆ ತಿಳಿದಿತ್ತು ಒಳಗೆ
No comments:
Post a Comment