ಒಟ್ಟು ನೋಟಗಳು

Friday, April 27, 2018

ಗುರುನಾಥ ಗಾನಾಮೃತ 
ಈ ಮನವು ನಿನ್ನದು ಮನದೊಳಗಿನ ಭಾವ ನಿನ್ನದು
ರಚನೆ: ಆನಂದರಾಮ್, ಶೃಂಗೇರಿ  


ಈ ಮನವು ನಿನ್ನದು ಮನದೊಳಗಿನ ಭಾವ ನಿನ್ನದು
ತನು ನಿನ್ನದು ಈ ತನುವಿನೊಳಗಿನ ಜೀವ ನಿನ್ನದು|

ಇನ್ನೇಕೆ ತಡ ಮಾಡುವೆ ಗುರುವೇ ಸರಿ ದಾರಿ ತೋರು
ಮುಳ್ಳುತುಂಬಿದ  ದಾರಿ ಆದರೇನು ನಿನ್ನಣತಿಯಂತೆ
ಹೂ ಹಸಿರು ಇದ್ದರೂ ಸರಿ ಅದು ನಿನ್ನ ಕರುಣೆಯಂತೆ
ಕಣ್ಮುಚ್ಚಿ ಸವೆಸುವೆನು ನಿನ್ನ ನೆನೆಯುತಾ ಗುರುವೇ|

ಸಂಸಾರ ಸಾಗರದಲಿ ಹುಟ್ಟು ಹಾಕುತ ನಾವೆ ನಡೆಸು
ಬವ ಬಂಧನಗಳ ಸುಳಿಗೆ ಎನ್ನ ದೂಡದೆ ಗುರುವೇ
ಸರಿ ತಪ್ಪುಗಳ ಅಲೆಯ ಸೆಳತದಿಂದ ದೂರವಿಡೆನ್ನ
ಭ್ರಮೆಯ ಸುಳಿಯೊಳು ಸಿಲುಕದಂತೆ ಕಾಪಾಡೆನ್ನ|

ಆಸೆ ಆಮಿಷಗಳೆಂಬ ಕೊಳಕು ತೇಲುತಿಹುದು ಅಲ್ಲಿ
ಮದ ಮತ್ಸರಗಳು ಮುಳುಗಿ ಏಳುತಿಹುದು ಇಲ್ಲಿ
ತನ್ನ ತನವ ಮರೆತು ಮೈ ಮರೆತಿದೆ ಈ ನನ್ನ ತನುವು
ಜಾಲಾಡಿಸಿ ಹೊಳಪು ನೀಡಿ ಕರುಣೀಸೋ ಗುರುವೇ|

No comments:

Post a Comment