ಒಟ್ಟು ನೋಟಗಳು

Friday, April 27, 2018

ಗುರುನಾಥ ಗಾನಾಮೃತ 
ಬೇಡುವೆನು ಗುರುವನ್ನು ಹರಸು ನೀ ಎನ್ನನು
ರಚನೆ: ಆನಂದರಾಮ್, ಶೃಂಗೇರಿ  


ಬೇಡುವೆನು ಗುರುವನ್ನು ಹರಸು ನೀ ಎನ್ನನು
ಅನುದಿನವು ಪ್ರತಿಕ್ಷಣವೂ ಬೇಡುವೆ ನಿನ್ನನು

ಮನದ ನೋವು ಬಿಡದೆ ಕಾಡುತಿದೆ ಎನ್ನನು
ನಿನ್ನ ನೆನೆಯದೆ ಬೇರೆ ದಾರಿ ತೋರದು ಇನ್ನು

ಯಾವ ರಾಗದಿ ಪಾಡಲು ನೀ ಕರುಣಿಸುವೆ
ಮೂಕನಾಗಿ ನಿಂತಿರುವೆ  ಕಾಣದೆ ಗುರುವೇ

ನಿನ್ನ ಕರುಣೆಗೆ ಹಂಬಲಿಸಿ ಕೂಗಿಹೆನು ನಾನು
ಇನ್ನೂ ದಯೆಬಾರದೆ ಹರಸಲು ನೀ ಎನ್ನನು
ಸಾದಾ ಬಕುತನು ನಾನು ಆಡಂಬರ ಗೊತ್ತಿಲ್ಲ
ಮಡಿಯುಟ್ಟು ಭಜಿಸುವುದು ನಾನು ತಿಳಿದಿಲ್ಲ

ತೊದಲುತಲೆ ನುಡಿವೆನು ನಿನ್ನ ನಾಮವನ್ನು
ಪದ್ಯ ಗದ್ಯ ರಚಿಸಿ ಪಾಡುವ ಪಂಡಿತ ನಾನಲ್ಲ

 ನೀ ಹರಸಿದರೆ ಸಾಕೆನಗೆ  ಬೇರೇನು ಬೇಕಿಲ್ಲ
ಕೈ ಬಿಡದೆ ಎನ್ನನು ಪೊರೆದರೆ ಸಾಕು ಗುರುವೇ

No comments:

Post a Comment