ಗುರುನಾಥ ಗಾನಾಮೃತ
ಕೈ ಬಿಡಬೇಡವೋ ಗುರುವೇ ಎನ್ನ ಪೊರೆಯೋ
ರಚನೆ: ಆನಂದರಾಮ್, ಶೃಂಗೇರಿ
ಕೈ ಬಿಡಬೇಡವೋ ಗುರುವೇ ಎನ್ನ ಪೊರೆಯೋ
ಬಿಡದೇ ಬೇಡಲು ಬಂದು ಕಾಯೋ ನನ್ನ ಗುರುವೇ|
ಮನದ ಶಂಕೆಯ ಪರಿಹರಿಸಿ ಎನ್ನ ಉದ್ದರಿಸೊ
ಸರಿ ತಪ್ಪ ತಿಳಿಸಿ ಈ ಮೂರ್ಖ ನಾ ಕ್ಷಮಿಸೋ|
ಅರಿವಿದ್ದು ಮಾಡಿಧಾ ಪಾಪಕೆ ಕ್ಷಮೆ ಇರಲಿ ಗುರುವೇ
ನಿನ್ನ ಭಯದಲ್ಲೇ ಬದುಕು ನಡೆಸಲು ಮತಿ ನೀಡು ಗುರುವೇ|
ನಿನ್ನ ಅರಿವು ಎನಗಾಗಲು ಇನ್ನು ಎಷ್ಟು ಜನುಮ ಬೇಕೋ
ಯಾವ ಪರಿಯ ಕರಮವೊ ಎನದು ಪರಿಹರಿಸಲು|
ಮನಸು ಮರ್ಕಟವು ಬಯಸುವುದು ಭ್ರಮೆಯಲಿ
ಅಹಂ ಅಳಿಯದೆ ಅವನ ಅರಿವಾಗುವುದು ನನಗೆಲ್ಲೀ|
ನಾನು ಯಾರೆಂದು ಅರಿಯಲು ನಿನ್ನ ಕೃಪೆ ಬೇಕು
ಎನ್ನ ಹೃದಯದಲಿ ನಿಜ ಬಕುತಿಯ ಸೆಲೆಇರಬೇಕು|
ಇದು ಮುಗಿಯದ ಪಯಣವು ನಿನ್ನ ಸೇರಲು ಗುರುವೇ
ಎನ್ನ ಕೈ ಬಿಡದೇ ಅಡಿಗಡಿಗೂ ಸಲಹೆನ್ನ ಗುರುವೇ|
No comments:
Post a Comment