ಗುರುನಾಥ ಗಾನಾಮೃತ
ಬದುಕು ಕಟ್ಟಲು ನಿನ್ನ ಹಾರೈಕೆ ಬೇಕೆನಗೆ ಗುರುವೇ
ರಚನೆ: ಆನಂದರಾಮ್, ಶೃಂಗೇರಿ
ಬದುಕು ಕಟ್ಟಲು ನಿನ್ನ ಹಾರೈಕೆ ಬೇಕೆನಗೆ ಗುರುವೇ
ನಿನ್ನ ನಾಮ ಬಲವೇ ಎನ್ನ ಕಾಯ್ವದು ಬಲ್ಲೆ ಗುರುವೇ|
ಬರೀ ಮಾತಿನ ಮನೆಯಲಿ ಕೂತು ಹಲಬುತಿಹೆನು
ಹಗಲು ಕನಸ ಬೆಂಬೆತ್ತೀ ನೀರಾಶನಾಗಿಹೆ ನಾನು
ಬದುಕಿನ ನಿಜ ಅರಿವು ನೀಡಿ ಹರಸೆನ್ನ ಗುರುವೇ
ನಿನ್ನ ಪದತಳದ ದೂಳಿಗೆ ಎನ್ನ ಶಿರವಿಡುವೆ ಗುರುವೇ|
ದೊರಕದೆ ಹತಾಶನಾದೆ ನಿನ್ನ ದರುಶನದ ಬಾಗ್ಯ
ಕರುಣೀಸೋ ಎನಗೆ ನಿಜ ಬಕುತಿಯಾ ಬಾವ
ಪರಮ ದಯಾಳು ನೀನಿಲ್ಲದೆ ನನ್ನ ಇರುವೇ ಇಲ್ಲಾ
ಎನ್ನ ಮನದಲಿ ನೆಲೆಸಿ ಹರಸೆನ್ನ ಸದ್ಗುರುವೆ|
ಕುಕರ್ಮಗಳ ಸುಳಿಯಲ್ಲಿ ಮುಳುಗಿಹ ಈ ಜೀವ
ಸ್ವಾರ್ಥ ಅಸೂಯೆಗಳ ಗೂಡಾಗಿದೆ ಈ ನನ್ನ ದೇಹ
ಹರಿಹರನು ನೀನಲ್ಲವೆನು ಎನ್ನ ಮನ್ನೀಸೊ ಗುರುವೇ
ಬವ ಬಂಧನವ ಬಿಡಿಸಿ ಎನ್ನ ಕಾಯೋ ಸದ್ಗುರುವೆ|
ಮೂರು ದಿನದ ಬದುಕಿನಲ್ಲೂ ಏನೆಲ್ಲಾ ನಿನ್ನ ಲೀಲೆ
ಭ್ರಮೆಯೇ ನಿಜವೆಂದು ಓಡುತಿಹುದು ಮನಸು
ನಿಜವನರಿಯಲು ನಿನ್ನ ದಯೆ ಬೇಕು ಗುರುವೇ
ಸರಿ ತಪ್ಪುಗಳ ಗೊಂದಲದ ಬಾಳು ಸಾಕು ಗುರುವೇ|
No comments:
Post a Comment