ಗುರುನಾಥ ಗಾನಾಮೃತ
ಉದ್ದರಿಸೊ ಗುರುವೇ ಎನ್ನ ಪರಿಪರಿಯಲಿ ಬೇಡುವೆ
ರಚನೆ: ಆನಂದರಾಮ್, ಶೃಂಗೇರಿ
ಉದ್ದರಿಸೊ ಗುರುವೇ ಎನ್ನ ಪರಿಪರಿಯಲಿ ಬೇಡುವೆ
ಹರಸಿ ಎನ್ನ ದಯೆ ತೋರಿ ದಾರಿ ತೊರೋ ಗುರುವೇ
ಮನದಾಳದ ದುಗುಡವದು ಕಾಡುತಿದೆ ಗುರುವೇ
ಸರಿ ತಪ್ಪಿನ ಅರಿವು ತಿಳಿಯದೇ ನೊಂದಿದೆ ಮನವು
ಬರಿ ಭ್ರಮೆಯ ಬದುಕು ಸಾಕಾಗಿದೆ ನನ್ನ ಗುರುವೇ
ನಿನ್ ಅರಿವು ಮೂಡಿಸಿ ನನ್ನ ಸಲಹೂ ಗುರುವೇ |
ದೋಣಿಯಲಿ ಕುಳಿತು ದಡ ಸೇರುವ ಕಾತುರವದು
ನಿನ್ನ ನಾಮದ ಬಲವೆಂಬ ಹುಟ್ಟು ಹಾಕುತ ನಾನು
ಮುಂದೆ ಅರಿಯದೆ ನಿನ್ನ ನಂಬಿ ನಡದೆ ನಾನು
ಸುಳಿಯಲಿ ಸಿಲುಕದೆ ಬಾಳ ದಡ ಸೇರಿಸು ಎನ್ನನು|
ಅಪರಾದವ ಮಾಡುತ ಮೈ ಮರೆತು ಕುಳಿತಿಹೆನೂ
ನಿನ್ನ ನೆನೆದರೆ ಸಾಕು ಎಂಬ ಹಂಬಿನಲಿ ಗುರುವೇ
ಎನ್ನ ಎಚ್ಚರಿಸಿ ಕನಿಕರಿಸಿ ದಾರಿ ತೊರೋ ಗುರುವೇ
ಪಶ್ಚತಾಪವದು ಉದ್ಡರಿಸಲು ಸಾಕಾಗದೆ ಗುರುವೇ|
No comments:
Post a Comment