ಒಟ್ಟು ನೋಟಗಳು

Friday, April 27, 2018

ಗುರುನಾಥ ಗಾನಾಮೃತ 
ಅಮ್ಮ ಎಂದು ಕೂಗಲು ಹಾಲುಣಿಸಿ ಸಲಹುವಳು ತಾಯಿ
ರಚನೆ: ಆನಂದರಾಮ್, ಶೃಂಗೇರಿ  


ಅಮ್ಮ ಎಂದು ಕೂಗಲು ಹಾಲುಣಿಸಿ ಸಲಹುವಳು ತಾಯಿ
                                        ಗುರುವೇ ಎನ್ನಲು ಕೃಪೆದೋರಿ  ಹರಸುವನು ಗುರುವು                                         
                                                   
ನಿನ್ನ ಧ್ಯಾನದಲಿ ಸದಾ ನಿರತನು ನಾನು
ಗುರುವೇ ಕೂಗಿದರೂ ದಯೆ ಬಾರದೇನು 
                                                        
ಎಲ್ಲವನು ಅರಿತವನು ಗುರು ನೀನಲ್ಲವೇನು
ನನ್ನ ಮನದ ಬಕುತಿಯ ಕೂಗು  ಕೇಳದೇನು
                                                    
ಅರಿವಿಲ್ಲದೆ ಮಾಡಿದ ಕರ್ಮವ ಮನ್ನಿಸೆಯಾ
ಪಶ್ಚಾತಾಪ ಪಡಲು ಎನ್ನ ನೀ ಹರಸೆಯಾ
ಎಲ್ಲರನು ಹರಸುವ ನೀನು ಬೇಡವಾದನೆ ನಾನು 
ಏನು ಮಾಡಲಿ ಇನ್ನು ನೀ ನನ್ನ ಕರುಣಿಸಲು

ಮನದ ಚಂಚಲತೆಯ ಹಿಡಿದಿಡಲಾರೆ ನಾನು
ಕರುಣೆ ತೋರಿ  ಎನ್ನ ಉದ್ಧರಿಸಬಾರದೆ ನೀನು

ಬಕುತರೊಡಗೂಡಿ ಬದುಕುವ ಆಸೆ ನನಗೆ
ನಿನ್ನ ನಿಜ ಬಕುತರ ಸಂಗ ನೀಡೆಯಾ ಎನಗೆ 

ಕಗ್ಗತ್ತಲಾ ಬದುಕು ಸಾಕೆನಿಸಿದೆ ಗುರುವೇ
 ಬೆಳಕ ನೀಡಿ  ಹರಸು ನೀ ನನ್ನ ಗುರುವೇ

No comments:

Post a Comment