ಗುರುನಾಥ ಗಾನಾಮೃತ
ನಾನೇನು ಮಾಡಿದೆ ಗುರುವೆ ಮುನಿಸೇಕೆ ಎನ್ನಮೇಲೆ
ರಚನೆ: ಆನಂದರಾಮ್, ಶೃಂಗೇರಿ
ನಾನೇನು ಮಾಡಿದೆ ಗುರುವೆ ಮುನಿಸೇಕೆ ಎನ್ನಮೇಲೆ
ನಿನ್ನ ಪಾದಾರವಿಂದಕೆ ಎನ್ನ ಶಿರವಿರಸಿ ನಾ ಬೇಡುವೆ|
ಎನ್ನ ಕೋರಿಕೆಯಲಿ ಬರೀ ಸ್ವಾರ್ಥವೇ ತುಂಬಿದೆಯೇ
ಎನ್ನ ಬಕುತಿಯಲಿ ಶುದ್ದ ಮನಸಿನಾ ಕೊರತೆಯೇ|
ನೀ ಕಾಣದ ಮನವದು ಎಲ್ಲಿದೆ ಹೇಳು ಓ ಗುರುವೇ
ಮಾತು ಕೃತಿಯಲಿ ಲೋಪ ಬಂದಿತೇ ನನ್ನ ಗುರುವೇ|
ಬದುಕು ನಡೆಸುವ ಬರದಿ ದಾರಿ ತಪ್ಪಿದೆನೆ ಗುರುವೇ
ಅನ್ಯರ ಮನನೋಯಿಸಿ ಬಾಳು ಕಟ್ಟಿದೆನೆ ಗುರುವೇ|
ಎನ್ನ ಬಲ್ಲವ ನೀನೇ ನನ್ನ ಕಾಯಬೇಕಲ್ಲವೇ ಗುರುವೇ
ನೀನು ಮುನಿದೊಡೆ ಇನ್ಯಾರ ನಾ ಬೇಡಲಿ ಗುರುವೇ|
ಏನು ಬೇಡಲಿ ತಿಳಿದೂ ಸುಮ್ಮನೇಕಿರುವೆ ಗುರುವೇ
ನಿನ್ನ ಮೌನದ ಮುನಿಸು ಹಾರೈಕೆಯು ನನ್ನ ಗುರುವೇ |
No comments:
Post a Comment