ಗುರುನಾಥ ಗಾನಾಮೃತ
ಅವತರಿಸಿದೆ ನೀ ಈ ಪುಣ್ಯ ಭೂಮಿಯಲಿ ಗುರುವೇ
ರಚನೆ: ಆನಂದರಾಮ್, ಶೃಂಗೇರಿ
ಅವತರಿಸಿದೆ ನೀ ಈ ಪುಣ್ಯ ಭೂಮಿಯಲಿ ಗುರುವೇ
ಕಲಿರಾಯನ ಅಬ್ಬರಿಕೆಯ ಪರ್ವ ಕಾಲದಲಿ ಗುರುವೇ ||
ನಡೆದಾಡುವ ದೇವ ನೀನು ಪ್ರಕಟಗೊಂಡೆ ಗುರುವೇ
ಅಡಿಗಡಿಗೂ ಕಲಿಯ ಕ್ರೂರ ದೃಷ್ಟಿಯ ಮುಂದೆ
ಪಾಪ ಕರ್ಮ ತುಂಬಿ ತೊಳುಕುವ ಈ ಕಾಲದಲ್ಲೂ
ಹರಸಿ ಉದ್ದಾರ ಮಾಡಲು ಅವತರಿಸಿದೆ ಗುರುವೇ||
ಕರ್ಮಬಂಧನದ ಅರಿವಿದ್ದರೂ ಕರ್ಮಮಾಡುತಿಹೆವು
ಕಲಿಯ ಪಾಪ ಕೂಪದಲ್ಲಿ ಬಿದ್ಧಿಹೆವು ನಾವು
ಸೂಕ್ಷ್ಮಮತಿ ನೀನು ನಮ್ಮ ಸಲಹೂ ಗುರುದೇವ
ಬಂದ ಮುಕ್ತಗೊಲಿಸು ಎಲ್ಲರ ನಮ್ಮ ಮಹಾದೇವ||
ನಾಜೂಕಿನ ನಯವಂಚಕರ ಮಾಯಾ ಜಾಲದಲಿ
ನರ ಜೀವಿಗಳ ಪಾಪ ಕೂಪದ ನಿತ್ಯ ತೊಳಲಾಟದಲಿ
ಗೊತ್ತಿದ್ದು ಬದುಕು ನಡೆಸುತಾ ಭ್ರಮೆಯ ಅರಿವಿನಲ್ಲಿ
ನಿನ್ನ ನಾಮವೊಂದು ಕಂಡಿತು ಮುಕ್ತಿಯ ಹಾದಿಯಲ್ಲಿ ||
No comments:
Post a Comment