ಗುರುನಾಥ ಗಾನಾಮೃತ
ಹೇಗೆ ಭಜಿಸಲಿ ಗುರುವೇ ಪದಗಳೇ ಸಾಲದಾಗಿದೆ
ರಚನೆ: ಆನಂದರಾಮ್, ಶೃಂಗೇರಿ
ಹೇಗೆ ಭಜಿಸಲಿ ಗುರುವೇ ಪದಗಳೇ ಸಾಲದಾಗಿದೆ
ಮನದಿ ಮೂಡುವ ಭಾವಕೆ ಅಂತ್ಯವೇ ಇಲ್ಲದಾಗಿದೆ|
ಮನವು ಮರುಗಿದೆ ಮೂಕ ರಾಗದಿ ನಿನ್ನ ಕಾಣದೆ
ತನುವು ಭಾರವಾಗಿದೆ ನಿನ್ನ ಸೇವೆಯ ತಾ ಮಾಡದೆ|
ಭಕ್ತಿ ಹೊರತು ಆರ್ಪಿಸಲು ಬೇರೇನಿಲ್ಲಾ ಗುರುವೇ
ನಿತ್ಯ ನಿನ್ನ ನೆನೆಯದೆ ಮತ್ತೇನೂ ಗೊತ್ತಿಲ್ಲ ಗುರುವೇ|
ಜೀವಕೆ ಇನ್ಯಾರ ಬಯವಿಲ್ಲ ನಿನ್ನ ಸೇವೆಯಲ್ಲಿದ್ಧಾಗ
ಹಸಿವಿಲ್ಲಾ ಧಣಿವಿಲ್ಲ ನಿನ್ನ ನಾಮದ ರಸ ಉಂಡಾಗ|
ಅನ್ಯರ ಚಿಂತೆ ಯಾಕೆ ನೀನಿರುವಾಗ ನನ್ನ ಗುರುವೇ
ಅಂತರಾಳದಲಿ ನೀ ನೆಲೆ ನಿಂತರೆ ಸಾಕು ಗುರುವೇ|
ಬೇರೇನೂ ಬೇಡೆನು ನಿನ್ನ ಕರುಣೆಯ ಹೊರತು ಗುರುವೇ
ಸಾರ್ಥಕ ಬದುಕು ನಡೆಸುವ ಬಲ ನೀಡೋ ಗುರುವೇ|
No comments:
Post a Comment