ಗುರುನಾಥ ಗಾನಾಮೃತ
ಸಖರಾಯಪುರವಾಸಿ ಸದ್ಗುರುನಾಥನ ಬೇಡಿರೊ
ರಚನೆ: ಆನಂದರಾಮ್, ಶೃಂಗೇರಿ
ಸಖರಾಯಪುರವಾಸಿ ಸದ್ಗುರುನಾಥನ ಬೇಡಿರೊ
ಮನಸಾರೆ ಭಜಿಸುತ ನಿತ್ಯ ಗುರುನಾಥನ ನೆನೆಸಿರೊ|
ಭಜಿಪ ಬಕುತನ ಭವಬಂಧನವ ಕಳೆವ ಗುರು ಇವನು
ನೆನೆದ ಕ್ಷಣದಲಿ ತನ್ನ ಬಕುತನ ಬವಣೆ ತೀರಿಪನೋ|
ಗುರುವು ಮುದದಿ ಬೇಡಲು ಮನಕ್ಲೇಶವ ಕಳೆವನೊ ಮೌನದಿನೀ ಭಜಿಸಲು ಗುರುವು ಮನವ ತೊಳೆವನು|
ಶುದ್ದ ಭಕುತಿಗೆ ಒಲಿದು ತಾ ಹರಸುವ ಗುರು ಇವನು
ತೋರಿಕೆ ಆಡಂಬರವ ತಾ ಬಯಸದ ಗುರು ಇವನು|
ಬೇಡಿ ಬರುವ ಭಕುತರ ಕೂಗು ಆಲಿಸುವ ಗುರು ಇವನು
ಬೆನ್ನ ಹಿಂದೆ ನಿಂತು ಕರುಣದಿ ಹರಸುವ ಗುರು ಇವನು|
ತಪ್ಪ ತಿದ್ದಿ ತನ್ನ ಭಕುತರ ಸಲಹುವ ಗುರು ಇವನು
ಎನೂ ಬಯಸದೆ ನಿತ್ಯ ಹರಸುವ ಗುರು ತಾ ಇವನು|
No comments:
Post a Comment