ಗುರುನಾಥ ಗಾನಾಮೃತ
ಅಮ್ಮ ನೋಡೇ ಗುರು ಬಂದಿಹರು ಅಮ್ಮಾ ನೋಡೇ
ರಚನೆ: ಆನಂದರಾಮ್, ಶೃಂಗೇರಿ
ಅಮ್ಮ ನೋಡೇ ಗುರು ಬಂದಿಹರು ಅಮ್ಮಾ ನೋಡೇ
ನಗುಮುಖದ ಸರದಾರ ಹರಸುತ ತಾ ಕುಳಿತಿಹರು|
ಮಂದಹಾಸವ ಬೀರುತ ಎನ್ನ ಸನಿಹ ಬಾ ಎಂದಿಹರು
ಕೈತುತ್ತು ನೀಡುತ ಗುರು ಎನ್ನ ಬವಣೆಯ ಕಳೆದಿಹರು|
ಮನದಿ ಮೂಡುವ ಮಲ್ಲಿಗೆ ಹೂ ನೀಡುವೆ ಅಮ್ಮ
ನನ್ನ ಹೃದಯ ಕಮಲದಲಿ ಗುರು ನೆಲಸಲಿ ಅಮ್ಮ |
ಈ ದೇಹವ ಹಣ್ಣು ಮಾಡಿ ನೀಡೆಂದರು ಅಮ್ಮಾ
ಮಸ್ತಕದಲಿ ತನ್ನ ನುಡಿ ಅಚ್ಚಾಗಿರಲಿ ಎಂದರಮ್ಮಾ|
ಆಡುವ ಮಾತಿಗೆ ಬಲು ಹಿಡಿತವಿರಲಿ ಎಂದರಮ್ಮಾ
ಮನ ನೋಯಿಸದಲಿ ಬದುಕು ನಡೆಸೆಂದರಮ್ಮಾ|
ಒಂದು ಪತ್ರೆ ಸಾಕು ನೂರಾರು ಬಾರಿ ಜಪಿಸೆಂದರಮ್ಮ
ಅನ್ಯರ ಬದುಕಿನಾ ಹುಳುಕು ನಿನದಲ್ಲಾ ಎಂದರಮ್ಮ |
ರಾಮನಾ ಕಥೆ ಬರೀ ಕಥೆ ಅಲ್ಲ ಎಂದರು ಅಮ್ಮಾ
ರಾಮನಂತೆ ನಿನ್ನ ಬದುಕು ನಡೆಸೆಂದರು ಅಮ್ಮಾ|
No comments:
Post a Comment