ಗುರುನಾಥ ಗಾನಾಮೃತ
ಮನ್ನಿಸೋ ಎನ್ನ ಗುರುನಾಥ ಎನ್ನ ಮನ್ನಿಸೋ
ರಚನೆ: ಆನಂದರಾಮ್, ಶೃಂಗೇರಿ
ಮನ್ನಿಸೋ ಎನ್ನ ಗುರುನಾಥ ಎನ್ನ ಮನ್ನಿಸೋ
ಪಾಮರನು ನಾನು ಎಡುವುದು ಸಹಜ ಮನ್ನಿಸೋ|
ಅರಿತು ಮಾಡುವೆನು ಪಾಪ ಲೌಕಿಕದ ಬದುಕಿನಲಿ
ತೋರಿಕೆಯ ಬದುಕು ಆಸೆ ಬುರುಕನ ಹಾದಿಯಲಿ|
ಆಡುವ ನುಡಿಗೂ ಮಾಡುವ ಕೃತಿಗೂ ಬೇಧವಿಹುದು
ಅರಿತು ಮಾಡುವ ಕರ್ಮದಲಿ ದೇಹ ಮುಳುಗಿಹುದು|
ಬೇಡೆಂದರೂ ಬೆನ್ನ ಬಿದ್ದಿದೆ ಆಸೆಗಳ ಮಹಾಪೂರ
ಬದಲಾವಣೆ ನಾಳೆಯ ನಿರೀಕ್ಷೆಯಲಿ ಬಲುದೂರ|
ಬಣ್ಣದ ಬದುಕಿನೆಡೆ ಮನ ಓಡುವುದು ಗುರುವೇ
ತೋರದಾದೆ ನಿಜ ಭಕುತಿಯ ನಿನ್ನಲಿ ಓ ಗುರುವೇ|
ನಿನ್ನ ನೆನೆದರೆ ಇಹುದು ಎಲ್ಲದಕೂ ನಿತ್ಯ ಪರಿಹಾರ
ನೆನೆಯುವ ಮನ ಕೊಡು ಓ ಗುರುವೇ ನಿರಂತರ|
No comments:
Post a Comment