ಒಟ್ಟು ನೋಟಗಳು

Sunday, December 10, 2017

ಗುರುನಾಥ ಗಾನಾಮೃತ 
ತೂಗಿದರು ಗುರುನಾಥನ ಸುಮಂಗಲಿಯರು
ರಚನೆ: ಅಂಬಾಸುತ 


ತೂಗಿದರು ಗುರುನಾಥನ ಸುಮಂಗಲಿಯರು
ಮಗು ನೀನು ಎಮಗೆನುತಾ ತೊಟ್ಟಿಲೊಳಗೆ ಮಲಗಿಸಿ ||ಪ||

ಮಾರ್ಗಶಿರಮಾಸದ ಕೃಷ್ಣ ಷಷ್ಠಿಯಂದು 
ಗುರುವರನ ಜನ್ಮೋತ್ಸವದಾ ಶುಭದಿನವಂತೇ
ಸೇರಿಹರು ಭಕ್ತರೂ ಸಿರಿಸಂಭ್ರಮಗಳಿಂದಾ
ತವರೀಗೆ ಬರುವಾ ಹೆಣ್ಣುಮಕ್ಕಳಂತೇ ||೧||

ಪ್ರದೋಷಕಾಲದಲ್ಲಿ ಭಜನೆ ಆರತಿ ಮಾಡಿ
ಬಗೆಬಗೆಯ ಸಿಹಿಯ ತಿನಿಸುಗಳಾ ನೀಡಿ
ಪಲ್ಲಕ್ಕಿಯೊಳು ಕುಳ್ಳಿರಿಸಿ ಸದ್ಗುರುರಾಯನಾ
ತಾಳಮೇಳದೊಂದಿಗೆ ಮೆರವಣಿಗೆ ಮಾಡುತಾ ||೨||

ತೊಟ್ಟಿಲ ಪೂಜೆಯಯಂತೇ ಗುಂಡಪ್ಪನಾ ಆಟವಂತೇ
ನಾಮಕರಣಾ ಭಜಬೆಣ್ಣೆ ಶಾಸ್ತ್ರಾವಿನೋದವಂತೇ
ಭಕುತಿ ಭಾವದಿ ಮೈಮರೆತಾ ಮಂಗಳೆಯರೂ
ಅಲಕೃಂತಗೊಂಡಾ ಮುತ್ತಿನಾ ತೊಟ್ಟಿಲೊಳೂ ||೩||

ನಾಮಸ್ಮರಣೆಯಿಂದ ಜಾಗರಣೆ ಮಾಡುತಾ
ರವಿ ಏರೊ ವರೆಗೂ ತೊಟ್ಟಿಲಾ ತೂಗುತಾ
ಆಡಿ ಪಾಡೀ ಸಂಭ್ರಮದಿ ಕುಣಿದಾಡೀ
ಅಂಬಾಸುತನ ದೊರೆ ಶ್ರೀವೇಂಕಟಾಚಲನಾ ||೪||

No comments:

Post a Comment