ಗುರುನಾಥ ಗಾನಾಮೃತ
ಸದ್ಗುರುವೇ ತಾಯಿಯೂ ಸದ್ಗುರುವೇ ತಂದೆಯೂ
ರಚನೆ: ಅಂಬಾಸುತ
ಸದ್ಗುರುವೇ ತಾಯಿಯೂ ಸದ್ಗುರುವೇ ತಂದೆಯೂ
ಸದ್ಗುರುವೇ ಸಕಲವೂ ನಮಗೆಲ್ಲಾ
ಸಖರಾಯಪುರದಾ ಸದ್ಗುರುವ ನೆನೆದರೇ
ದುಖಃ ಸಂಕಟವೆಂಬುದೇ ಇಲ್ಲಾ ||ಪ||
ಅನಾಥ ಭಾವ ಅಳಿಸೀ ಆಶ್ರಯವನ್ನು ನೀಡೀ
ಸಂತತ ಸಲಹುವನು ಸದ್ಗುರುನಾಥನೂ
ಬೇಡದೇ ನೀಡುವನು ಬೇಡಿಕೆ ಎಲ್ಲವನೂ
ಕಲಿಯುಗದ ಕಾಮಧೇನು ಕಲ್ಪವೃಕ್ಷ ಇವನೂ ||೧||
ಶುದ್ದಂತಃಕರಣದಿ ಬದ್ದನಾಗೀ ಭಜಿಸೇ
ಎದುರು ತಾ ನಿಲ್ಲುವನು ಸದ್ಗುರುನಾಥನೂ
ಕೊಳೆಯಾ ತೊಳೆದೂ ಮನದಿ ಜ್ಞಾನದೀವಿಗೆ ಬೆಳಗಿ
ಹರಿಹರರಾ ರೂಪ ತಾಳಿ ನಿಲ್ಲುವನಿವನೂ ||೨||
ದುಷ್ಟರಿಗೆ ಕಷ್ಟನೂ ಶಿಷ್ಟರಿಗೇ ಇಷ್ಟನೂ
ವಿಶಿಷ್ಟ ರೂಪನೂ ಸದ್ಗುರುನಾಥನೂ
ಮಾಯೆಯಾ ಸರಿಸುವಾ ಮಹನೀಯನೂ
ಮಾತೆಯಾಗೀ ಮಮತೆ ತೋರುವನಿವನೂ ||೩||
ಅಂಬಾಸುತನ ಅಂತರಂಗದೊಳಿರುವನು
ಅನವರತ ಪೊರೆವನು ಸದ್ಗುರುನಾಥನು
ಶ್ರೀವೇಂಕಟಾಚಲನೆಂಬಾ ಅವಧೂತನೂ
ಧರೆಯಾನುಧ್ಧರಿಸೇ ತಾ ಓಡಿ ಬಂದಿಹನೂ ||೪||
No comments:
Post a Comment