ಒಟ್ಟು ನೋಟಗಳು

Monday, December 11, 2017

ಗುರುನಾಥ ಗಾನಾಮೃತ 
ಮುಖಕಮಲ ತೋರಯ್ಯ ಗುರುದೇವಾ 
ರಚನೆ: ಅಂಬಾಸುತ 


ಮುಖಕಮಲ ತೋರಯ್ಯ ಗುರುದೇವಾ 
ನಿನ್ನ ಮುಖಕಮಲ ತೋರಯ್ಯಾ ಗುರುದೇವಾ ||ಪ||

ರವಿ ಶಶಿಯರು ನಿನ್ನ ನೇತ್ರವಾಗಿಹರಂತೇ
ಶಾರದೆಯೂ ನಿನ್ನಾ ನಾಲಿಗೆಯೊಳಿಹಳಂತೇ ||೧||

ಭಸ್ಮರೂಪಿ ಹರ ಹಣೆಯುಳಿಹನಂತೆ
ಆ ಹರಿಯ ಚೈತನ್ಯ ವದನ ತುಂಬಿಹುದಂತೇ ||೨||

ಕ್ಷಣಕಾಲ ನಗುವಂತೆ ಕ್ಷಣಕಾಲ ಮುನಿಸಂತೆ
ನಿನ್ನ ಅರಿತವರಾರೂ ಇಲ್ಲಿ ಇಲ್ಲವಂತಯ್ಯ ||೩||

ಬಳಲಿ ಬಂದಿಹೆನಯ್ಯಾ  ಕಾದು  ನಿಂದಿಹೆನಯ್ಯಾ
ನೀನೆ ಗತಿ ಎಮಗೆಂದು ನಾನು ನಂಬಿಹೆನಯ್ಯಾ ||೪||

ಕಂಡವರೆ ಪುಣ್ಯದಾ ಹೊರೆಹೊತ್ತು ಬಂದವರು
ಕಾಣದವರಾ ಕರ್ಮ ಎಂದಿಗೂ ಕಳೆಯದೋ ||೫||

ಸಖರಾಯಪುರಾಧೀಶಾ ಸದ್ಗುರುನಾಥಾ
ಅಂಬಾಸುತನ ಈ ಅರಿಕೆ ನೀ ಕೇಳಯ್ಯ ||೬||

No comments:

Post a Comment