ಗುರುನಾಥ ಗಾನಾಮೃತ
ದಾಸತನದೊಳು ಸುಖವಿಹುದು ಅರಿಯೋ
ರಚನೆ: ಅಂಬಾಸುತ
ದಾಸತನದೊಳು ಸುಖವಿಹುದು ಅರಿಯೋ
ನಮ್ಮ ಸದ್ಗುರುವಿನ ದಾಸರ ದಾಸರ ದಾಸರ
ದಾಸತನದೊಳು ಸುಖವಿಹುದು ಅರಿಯೋ ||ಪ||
ಅನುಭವಾಮೃತ ಕೇಳುತಾ ಅವರಡಿಗಡಿಗೆರಗುತಾ
ಅಂತರಂಗದಿ ಸದ್ಗುರು ಮೂರುತಿಯ ನಿಲ್ಲಿಸುವಾ ||೧||
ಅಹಂಕಾರಾದಿ ಅರಿಗಳನೂ ದೂರಕೇ ತಳ್ಳುತಾ
ಆನಂದ ನೀಡೋ ಅಂತಃಕರಣ ಶುದ್ಧತೆಯ ಸಾಧಿಸುವಾ ||೨||
ಜ್ಞಾನ ದೀವಿಗೆ ಬೆಳಗೋ ಅಜ್ಞಾನ ತಮ ಕಳೆಯೋ
ಆತ್ಮೋದ್ಧಾರಕೆ ಮೊದಲ ಹೆಜ್ಜೆಯೂ ಎನಿಸಿರುವಾ ||೩||
ಸತ್ಸಂಗ ಸತ್ಚಿಂತನೇ ಸಮಗ್ರ ಸದ್ಗುರುವಿನಾ ವರ್ಣನೇ
ಸಾಲದಿಹುದೇ ಇಲ್ಲದಾ ಪರಮ ಸುಖಧಾಮ ಎನಿಸುವಾ ||೪||
ಸಖರಾಯಪುರಾಧೀಶಾ ನಿನ್ನ ದಾಸರ ದಾಸರ ದಾಸರ
ದಾಸತನದೊಳೀ ಅಂಬಾಸುತಗೆ ಸುಖವಿಹುದು ಅರಿಯೋ ||೫||
No comments:
Post a Comment