ಗುರುನಾಥ ಗಾನಾಮೃತ
ಅವತರಿಸಿದ ಗುರುನಾಥಾ
ರಚನೆ: ಅಂಬಾಸುತ
ಅವತರಿಸಿದ ಗುರುನಾಥಾ
ಈ ಧರೆಯನುದ್ದರಿಸೇ ಅವಧೂತನಾಗೀ ||ಪ||
ವೆಂಕಟರಮಣನ ವರ ಸ್ವರೂಪನಾಗೀ
ಶಾರದೆ ಶ್ರೀನಿವಾಸರ ಕಂದನಾಗೀ ||೧||
ಮಾರ್ಗಶಿರ ಮಾಸದಿ ಕೃಷ್ಣ ಪಕ್ಷದೀ
ಷಷ್ಠಿಯ ಶುಭದಿನದಂದೂ ||೨||
ಕೃಷ್ಣಯೋಗೀಂದ್ರರಾ ಅವತಾರಿಕನೀತಾ
ಭಕುತರ ಕಷ್ಟಕಳೆಯೇ ಭಗವಂತಾ ||೩||
ಸಖರಾಯಪುರದೊಳೂ ವೇಂಕಟಾಚಲ ನಾಮದೀ
ವಿಧವಿಧ ವಿನೋದಗಳನೇ ತೋರುಲೂ ||೪||
ಅಂಬಾಸುತನಾ ಹೃತ್ಕಮಲ ವಾಸಾ
ಆನಂದರೂಪಾ ಆಗಮವಂದಿತಾ ||೫||
No comments:
Post a Comment