ಗುರುನಾಥ ಗಾನಾಮೃತ
ಜ್ಞಾನವ ನೀಡಯ್ಯ ಗುರುವೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಜ್ಞಾನವ ನೀಡಯ್ಯ ಗುರುವೇ
ಕರುಣೆಯ ತೋರಯ್ಯ ಸದ್ಗುರುವೇ || ಪ ।।
ಚಿನ್ನಕೆ ದೊರಕದ
ರತ್ನಕಿಂತ ಅಮೂಲ್ಯದ
ನಿನ್ನ ಪೂಜಿಪ ಜ್ಞಾನವ ನೀಡಯ್ಯಾ
ನಿನ್ನ ಸೇವಿಪ ಮತಿಯ ನೀಡಯ್ಯಾ ।।
ಪಂಡಿತಗೂ ಸಿಗದ
ಪಾಮರನಿಗೂ ತಿಳಿಯದ
ಜ್ಞಾನವನೀವ ಸಮರ್ಥ ನೀನಯ್ಯಾ
ನಿನ್ನನಲ್ಲದೆ ಬೇರಾರನು ಕೇಳೆನಯ್ಯಾ ।।
ಕಡಲಿಗಿಂತ ಆಳವಾದ
ಗಗನಕಿಂತ ಮಿಗಿಲಾದ
ಜ್ಞಾನವ ಪಡೆಯಲೆನ್ನ ಅನುಗ್ರಹಿಸಯ್ಯಾ
ಜ್ಞಾನದ ಭಿಕ್ಷೆಯ ನೀಡಯ್ಯಾ ।।
ಗಣನೆಗೆ ಸಿಲುಕದ
ಕಲ್ಪನೆಗೆ ಮೀರಿದ
ಅರಿವ ಅರಿಯಲೆಮ್ಮ ದಾರಿ ತೋರಯ್ಯ
ಜ್ಞಾನದ ಹಾದಿಯಲಿ ಕೈ ಪಿಡಿದು ನಡೆಸಯ್ಯಾ ।।
No comments:
Post a Comment