ಅವಧೂತ - ಅಸಮಾನ್ಯ - ಅಪ್ರಮೇಯ - ೧೯
ಸಂಗ್ರಹ : ಅಂಬಾಸುತ
ಸಾತ್ವಿಕ ಕುಟುಂಬವೊಂದನ್ನು ಗುರುದರ್ಶನಕ್ಕೆ ಕರೆತಂದ ವ್ಯಕ್ತಿ ಹಿಂದಿನ ದಿನ ಮದ್ಯಪಾನ ಮಾಡಿರುತ್ತಾನೆ. ಆದರೆ ಆ ಕುಟುಂಬಕ್ಕೆ ಈ ವಿಚಾರ ತಿಳಿದಿರುವುದಿಲ್ಲ. ಅವರೆಲ್ಲರೂ ಇನ್ನೇನು ಗುರುನಿವಾಸದ ಒಳಗೆ ಹೋಗಬೇಕು ಎನ್ನುವಷ್ಟರಲ್ಲಿ ಒಳಗಿನಿಂದ, "ಕುಡಿದು ಬರುವವರಿಗೆಲ್ಲ ಈ ಮನೆಲಿ ಜಾಗ ಇಲ್ಲ, ನಡಿ ಹೊರಕ್ಕೆ" ಎಂಬ ಧ್ವನಿ ಕೇಳಿ ಬರುತ್ತದೆ. ಇವರುಗಳು ಇಂದು ಗುರುದರ್ಶನದ ಭಾಗ್ಯವಿಲ್ಲವೆಂದು ಹೊರಡಲು ಅನುವಾದಾಗ, ಗುರುನಿವಾಸದ ಒಳಗಿನಿಂದ ಬಂದ ವ್ಯಕ್ತಿಯೊಬ್ಬರು, ಆ ಮದ್ಯಪಾನ ಮಾಡಿದ ವ್ಯಕ್ತಿಯನ್ನು ಬಿಟ್ಟು ನೀವೆಲ್ಲರೂ ಗುರುದರ್ಶನಕ್ಕೆ ಬರಬೇಕೆಂದು ತಿಳಿಸುತ್ತಾರೆ. ಮತ್ತು ಅವರೆಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಆಶೀರ್ವದಿಸುತ್ತಾರೆ. ಹೀಗೆ ದುಷ್ಟತನವನ್ನು ದೂರಿರಿಸಿ ಸಾತ್ವಿಕರನ್ನು ಪರಿಪಾಲಿಸಿದವರು - ಅವಧೂತರು.
No comments:
Post a Comment